ಕೇಜ್ರಿವಾಲ್‌ಗೆ ಬೂಟೇಟು

ಸೋಮವಾರ, 2 ಜನವರಿ 2017 (09:17 IST)
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾನುವಾರ ಹರಿಯಾಣದ ರೊಹಟಕ್‌ನಲ್ಲಿ ರ‍್ಯಾಲಿಯನ್ನು ನಡೆಸುವಾಗ ಯುವಕನೋರ್ವ ಅವರೆಡೆ ಶೂ ಎಸೆದಿದ್ದಾನೆ.

ನೋಟು ನಿಷೇಧದ ಕುರಿತಂತೆ ಕೇಜ್ರಿವಾಲ್ ತಮ್ಮ ಸಮರ್ಥಕರನ್ನುದ್ದೇಶಿಸಿ ಮಾತನಾಡುತ್ತಿರುವಾಗ ಜನರ ಗುಂಪಿನಲ್ಲಿದ್ದ ಯುವಕನೋರ್ವ ಶೂ ಎಸೆದಿದ್ದು ಅದು ವೇದಿಕೆಯಂಚಿಗೆ ಬಡಿದು ಕೆಳಕ್ಕೆ ಬಿತ್ತು.
 
ಇದರಿಂದ ಕೋಪಗೊಂಡ ಕೇಜ್ರಿವಾಲ್ ಇದು ಪ್ರಧಾನಿ ಮೋದಿ ಬೆಂಬಲಿಗರ ಕೃತ್ಯ ಎಂದು ಕಿಡಿಕಾರಿದರು. 
 
ಮೋದಿ ಹೇಡಿ ಎಂದು ನಾನು ಈಗಾಗಲೇ ಹೇಳಿದ್ದೇನೆ. ತಮ್ಮ ಬೆಂಬಲಿಗರ ಮೂಲಕ ಅವರು ನನ್ನ ಮೇಲೆ ಚಪ್ಪಲಿ ಎಸೆದಿದ್ದಾರೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. 
 
ಸಿಎಂ ಮೇಲೆ ಶೂ ಎಸೆದವನನ್ನು ದಾದ್ರಿ ಜಿಲ್ಲೆಯ ವಿಕಾಸ್ ಕುಮಾರ್ ಎಂದು ಗುರುತಿಸಲಾಗಿದೆ. ಘಟನೆ ಬಳಿಕ ಆಪ್ ಕಾರ್ಯಕರ್ತರು ಆತನನ್ನು ಹಿಡಿದು ಮನಬಂದಂತೆ ಥಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ