ಶ್ರದ್ಧಾ ಹತ್ಯೆ : ಮೂಳೆಗಳನ್ನು ಮಿಕ್ಸಿಯಲ್ಲಿ ಪುಡಿ ಮಾಡಿದ್ದ ಅಫ್ತಾಬ್
ಬುಧವಾರ, 8 ಫೆಬ್ರವರಿ 2023 (10:50 IST)
ನವದೆಹಲಿ : ಕಳೆದ ವರ್ಷ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದ್ದ ಯುವತಿ ಶ್ರದ್ಧಾಳ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು.
ಇದೀಗ ಘಟನೆಯ ಕುರಿತು 6,600 ಪುಟಗಳ ಚಾರ್ಜ್ಶೀಟ್ನಲ್ಲಿ ಇನ್ನೂ ಅನೇಕ ಭಯಾನಕ ವಿವರಗಳು ಬಹಿರಂಗವಾಗಿದೆ.
ಶ್ರದ್ಧಾಳನ್ನು ಕೊಲೆ ಮಾಡಿದ್ದ ಆಕೆಯ ಲಿವ್ಇನ್ ಪಾರ್ಟ್ನರ್ ಅಫ್ತಾಬ್ ಪೂನಾವಾಲ ಆಕೆಯ ಮೂಳೆಗಳನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿದ್ದ. ಮೇ 18 ರಂದು ಅಫ್ತಾಬ್ ಕೊಲೆ ಮಾಡಿದ ಬಳಿಕ ಝೊಮಾಟೋದಿಂದ ಚಿಕನ್ ರೋಲ್ ಅನ್ನು ತರಿಸಿಕೊಂಡು ಊಟ ಮಾಡಿದ್ದ ಎಂದು ಉಲ್ಲೇಖಿಸಲಾಗಿದೆ.
ಕಳೆದ ವರ್ಷ ಮೇ ತಿಂಗಳಿನಲ್ಲಿ ಶ್ರದ್ಧಾ ವಾಕರ್ ಮತ್ತು ಆಫ್ತಾಬ್ ಪೂನಾವಾಲಾ ದೆಹಲಿಗೆ ತೆರಳಿದ್ದರು. ಆದರೆ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿತ್ತು. ತಮ್ಮ ಖರ್ಚು ವೆಚ್ಚಗಳು ಹಾಗೂ ಅಫ್ತಾಬ್ಗೆ ಇತರ ಯುವತಿಯರೊಂದಿಗಿದ್ದ ಸಂಬಂಧದ ಬಗ್ಗೆ ಆಗಾಗ ಜಗಳವಾಗುತ್ತಿತ್ತು. ಆತನಿಗೆ ದೆಹಲಿಯಿಂದ ದುಬೈ ತನಕವೂ ಗೆಳತಿಯರಿದ್ದರು ಎನ್ನಲಾಗಿದೆ.