ಕುಗ್ಗಿದ ಪ್ರಧಾನಿ ನರೇಂದ್ ಮೋದಿ ಜನಪ್ರಿಯತೆ

ಬುಧವಾರ, 18 ಆಗಸ್ಟ್ 2021 (10:11 IST)
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನಪ್ರಿಯತೆಯು ಸ್ವಲ್ಪಮಟ್ಟಿಗೆ ಕುಗ್ಗಿದ್ದು, 'ಮುಂದಿನ ಪ್ರಧಾನಿ' ಕುರಿತು ಇಂಡಿಯಾ ಟುಡೆ ನಡೆಸಿದ್ದ ಸಮೀಕ್ಷೆಯಲ್ಲಿ ಶೇ 24ರಷ್ಟು ಜನರಷ್ಟೇ ಮೋದಿ ಪರ ಒಲವು ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಆಗಸ್ಟ್ ತಿಂಗಳು ಇದೇ ವಿಷಯ ಕುರಿತು ನಡೆಸಿದ್ದ ಸಮೀಕ್ಷೆಯಲ್ಲಿ ಶೇ 66ರಷ್ಟು ಜನರು ಮೋದಿ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಹೊಸ ಸಮೀಕ್ಷೆಯ ಫಲಿತಾಂಶದ ಪ್ರಕಾರ, ಶೇ 11ರಷ್ಟು ಜನರು ಮುಂದಿನ ಪ್ರಧಾನಿಯಾಗಿ ಯೋಗಿ ಆದಿತ್ಯನಾಥ ಅವರನ್ನು ಕಾಣಲು ಬಯಸಿದ್ದಾರೆ.
ಇದೇ ತಿಂಗಳು ನಡೆಸಿದ ಸಮೀಕ್ಷೆಯ ಪ್ರಕಾರ, ಮೋದಿ ಜನಪ್ರಿಯತೆಯು ಕುಗ್ಗಿದ್ದರೂ ಈಗ ಲೋಕಸಭೆಗೆ ಚುನಾವಣೆ ನಡೆದರೂ ಬಿಜೆಪಿಯು ಸುಮಾರು 298 ಸ್ಥಾನ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆಯುವ ಸಂಭವವಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ