ಐಸ್ ಕ್ರೀಂ ಸವಿದ ಪ್ರಧಾನಿ ಮೋದಿಗೆ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಕೊಟ್ಟ ಗಿಫ್ಟ್ ಏನು ಗೊತ್ತಾ?!

ಮಂಗಳವಾರ, 17 ಆಗಸ್ಟ್ 2021 (09:40 IST)
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದು ಬಂದ ಮೇಲೆ ಜೊತೆಗೇ ಐಸ್ ಕ್ರೀಂ ಸವಿಯೋಣ ಎಂದು ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧುಗೆ ನೀಡಿದ್ದ ಮಾತನ್ನು ಪ್ರಧಾನಿ ಮೋದಿ ನಿನ್ನೆ ಪೂರೈಸಿದರು.
Photo Courtesy: Twitter


ತಮ್ಮ ನಿವಾಸದಲ್ಲಿ ಒಲಿಂಪಿಕ್ ಪದಕ ವೀರರೊಂದಿಗೆ ವಿಶೇಷ ಔತಣಕೂಟ ಸವಿದ ಪ್ರಧಾನಿ ಮೋದಿ ಎಲ್ಲಾ ಕ್ರೀಡಾಳುಗಳನ್ನು ಮಾತನಾಡಿಸಿ ಅಭಿನಂದಿಸಿದರು. ಈ ವೇಳೆ ಪಿ.ವಿ. ಸಿಂಧುಗೆ ಸ್ಪೆಷಲ್ ಐಸ್ ಕ್ರೀಂ ತರಿಸಿ ಕೊಟ್ಟ ಮಾತು ಪೂರೈಸಿದರು.

ಇನ್ನು, ತಮ್ಮ ಜೊತೆಗೆ ಐಸ್ ಕ್ರೀಂ ಸವಿದ ಪ್ರಧಾನಿ ಮೋದಿಗೆ ಪಿ.ವಿ. ಸಿಂಧು ಕೂಡಾ ವಿಶೇಷ ಉಡುಗೊರೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಿಂಧು, ಒಲಿಂಪಿಕ್ ಕ್ರೀಡಾಳುಗಳಿಗೆ ನೀವು ನೀಡಿದ ಪ್ರೋತ್ಸಾಹ, ಸಹಾಯ ಅವಿಸ್ಮರಣೀಯ. ನಿಮ್ಮ ಜೊತೆ ಐಸ್ ಕ್ರೀಂ ಸವಿಯುವ ಅವಕಾಶ ನೀಡಿದ್ದಕ್ಕೆ ಧನ್ಯವಾದ ಮೋದಿ ಜಿ. ಈ ಸಂದರ್ಭದಲ್ಲಿ ನನ್ನ ಕಡೆಯಿಂದ ನಿಮಗೆ ಬ್ಯಾಡ್ಮಿಂಟನ್ ರಾಕೆಟ್ ನ ಉಡುಗೊರೆ ನೀಡುತ್ತಿದ್ದೇನೆ ಎಂದಿದ್ದಾರೆ. ಅಲ್ಲದೆ, ಪ್ರಧಾನಿ ಮೋದಿ ಕೂಡಾ ಸಿಂಧು ನೀಡಿದ ಉಡುಗೊರೆಯನ್ನು ಖುಷಿಯಿಂದಲೇ ಸ್ವೀಕರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ