ಶ್ರೀನಗರ:ಜಮ್ಮಾ ಮಸೀದಿಯೊಂದನ್ನು ಧ್ವಂಸ ಮಾಡಿದ್ದಾರೆ ಎಂಬ ಕಾರಣಕ್ಕೆ ಜಮ್ಮು ಮತ್ತು ಕಾಶ್ಮೀರದಲ್ಲಿ ಘರ್ಷಣೆ ಏರ್ಪಟ್ಟಿದ್ದು, ದಕ್ಷಿಣ ಕಾಶ್ಮೀರದ ಅನಂತ್ ನಾಗ್ ಟೌನ್ ನಲ್ಲಿ ಬಂದ್ ಆಚರಣೆ ನಡೆಸಲಾಗುತ್ತಿದೆ.
ಮಸೀದಿಯನ್ನು ಧ್ವಂಸ ಮಾಡಿದ್ದಾರೆಂದು ಸುದ್ದಿ ಹರಡುತ್ತಿದ್ದಂತೆಯೇ ದಕ್ಷಿಣ ಕಾಶ್ಮೀರದ ಹಲವೆಡೆ ಕಲ್ಲು ತೂರಾಟ ಆರಂಭವಾಗಿದೆ. ಭದ್ರತಾ ಸಿಬ್ಬಂದಿಗಳ ಮೇಲೂ ಕಲ್ಲು ತೂರಾಟ ನಡೆಸಲಾಗಿದ್ದು, ಇದೀಗ ಮಸೀದಿಯ ಸಮಿತಿ ಸದಸ್ಯರು ದಕ್ಷಿಣ ಕಾಶ್ಮೀರದಲ್ಲಿ ಬಂದ್ ಗೆ ಕರೆ ನೀಡಿದ್ದು, ಜನರ ಜೀವನ ಅಸ್ತವ್ಯಸ್ತಗೊಂಡಿದೆ.
ಮಾಸೀದಿ ಸಮಿತಿಯ ಮುಖ್ಯಸ್ಥ ಕ್ವಾಜಿ ಯಾಸಿರ್ ಅಹ್ಮದ್, ಮಸೀದಿ ಧ್ವಂಸಗೊಂಡ ಬಳಿಕ ಸ್ಥಳಕ್ಕೆ ಬಂದಿದ್ದ ಭದ್ರತಾ ಸಿಬ್ಬಂದಿಗಳು ಘರ್ಷಣೆ ವೇಳೆ 14 ಜನರನ್ನು ಬಂಧಿಸಿದ್ದಾರೆಂದು ಆರೋಪಿಸಿದ್ದಾರೆ.
ಆದರೆ ಯಾಸಿರ್ ಅಹ್ಮದ್ ಅವರ ಈ ಆರೋಪವನ್ನು ಜಮ್ಮು-ಕಾಶ್ಮೀರ ಪೊಲೀಸರು ತಳ್ಳಿ ಹಾಕಿದ್ದಾರೆ.