ಬೆಂಗಳೂರು ನಗರಕ್ಕೆ ಸಿದ್ದು ಬಜೆಟ್`ನಲ್ಲಿ ಬಂಪರ್

ಬುಧವಾರ, 15 ಮಾರ್ಚ್ 2017 (17:09 IST)
ಕೆರೆ ಅಭಿವೃದ್ಧಿ, ಮೂಲ ಸೌಕರ್ಯ ಸೇರಿದಂತೆ ಬೆಂಗಳೂರು ನಗರದ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್`ನಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ನಮ್ಮ ಕ್ಯಾಂಟೀನ್ ಮೂಲಕ ಕಡಿಮೆ ದರದ ಊಟದ ಸೌಲಭ್ಯ ನೀಡಲಾಗಿದೆ. ಮೆಟ್ರೋ, ರೈಲು ಅಭಿವೃದ್ಧಿಗೂ ಗಮನಹರಿಸಲಾಗಿದೆ.
 


- ಬೆಂಗಳೂರು ನಗರ ಅಭಿವೃದ್ಧಿಗೆ 7,300 ಕೋಟಿ ರೂ.

- 5 ರೂಪಾಯಿಗೆ ತಿಂಡಿ, 10 ರೂಪಾಯಿಗೆ ಊಟ. 198 ವಾರ್ಡ್`ಗಳಲ್ಲಿ ಜನಪ್ರಿಯ ನಮ್ಮ ಕ್ಯಾಂಟೀನ್ ಯೋಜನೆ

- 2 ಸ್ಟ್ರೋಕ್  ಆಟೋ ರದ್ದು, 4 ಎಲ್`ಪಿಜಿ ಆಟೋಗಳಿಗೆ 10 ಸಾವಿರ ಸಹಾಯಧನ

-  690 ಕೋಟಿ ರೂಪಾಯಿ ವೆಚ್ಚದಲ್ಲಿ  80 ಕಿ.ಮೀ ಉದ್ದದ್ದ 43 ಪ್ರಮುಖ ರಸ್ತೆಗಳ ಅಭಿವೃದ್ಧಿ

- ಟೆಂಡರ್ ಶ್ಯೂರ್ ಮಾದರಿಯ 25 ಕಿ.ಮೀ ಉದ್ದದ 25 ರಸ್ತೆಗಳು ಮೇಲ್ದರ್ಜೆಗೆ

- ಮಳೆನೀರು ಚರಂಡಿಗಳ ಅಭಿವೃದ್ಧಿಗೆ 300 ಕೋಟಿ ರೂಪಾಯಿ

- 50 ಕೋಟಿ ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ

- ಬೆಂಗಳೂರಿನ ಆಯ್ದ ಕ್ಲಸ್ಟರ್`ಗಳಲ್ಲಿ ಬಾಡಿಗೆ ಸೈಕಲ್ ಒದಗಿಸುವ ಯೋಜನೆ ಅರಂಭ

- ಎಲ್ಲರಿಗೂ ಸೂರು’ ಅಭಿಯಾನದಡಿ ನಗರ ಸ್ಥಳೀಯ ಸಂಸ್ಥೆಗಳು ಮತ್ತು ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ 60,000 ಮನೆಗಳ ನಿರ್ಮಾಣ

- 42 ಕೋಟಿ ರೂ. ವೆಚ್ಚದಲ್ಲಿ ನಗರದ 10 ಕೆರೆಗಳ ಅಭಿವೃದ್ಧಿ, ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಸಮಗ್ರ ಅಭಿವೃದ್ಧಿಗೆ ಕ್ರಮ

- ಬೆಂಗಳೂರಿನಲ್ಲಿ ಉಪನಗರ ರೈಲು ಯೋಜನೆ ಜಾರಿ

ವೆಬ್ದುನಿಯಾವನ್ನು ಓದಿ