ಬಾಲಕಿಯ ಖಾಸಗಿ ಅಂಗಕ್ಕೆ ಕುದಿಯುವ ಎಣ್ಣೆ ಎರಚಿದ ಪಾಪಿ ಮಲತಾಯಿ!

ಗುರುವಾರ, 14 ಜುಲೈ 2022 (16:28 IST)
ಲಕ್ನೋ : 35 ವರ್ಷದ ಮಹಿಳೆಯೊಬ್ಬಳು 6 ವರ್ಷದ ದುತ್ತು ಪುತ್ರಿಯ ಖಾಸಗಿ ಅಂಗಕ್ಕೆ ಕುದಿಯುತ್ತಿರುವ ಎಣ್ಣೆ ಎರಚಿದ ವಿಲಕ್ಷಣ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಆರೋಪಿ ಮಹಿಳೆಯನ್ನು ಪೂನಂ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧಿಸಿದಂತೆ ಬುಧವಾರ ರಾತ್ರಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಮಹಿಳೆ ದತ್ತು ಪುತ್ರಿಗೆ ಎಣ್ಣೆ ಎರಚಿ ಚಿತ್ರಹಿಂಸೆ ನೀಡಿದ ಬೆನ್ನಲ್ಲೇ ಪೂನಂ ಪತಿ ಅಜಯ್ ಕುಮಾರ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಇತ್ತ ಮಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. 

ಪ್ರಕರಣ ದಾಖಲಿಸಿಕೊಂಡ ಬಳಿಕ ಅಲ್ಲಿನ ಎಸ್ಹೆಚ್ಒ ಹರಿ ಶಂಕರ್ ಚಂದ್ರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಪೂನಂ ಹಾಗೂ ಅಜಯ್ ದಂಪತಿಗೆ ಮಕ್ಕಳಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು 6 ತಿಂಗಳ ಹಿಂದೆಯಷ್ಟೇ ಹೆಣ್ಣು ಮಗುವೊಂದನ್ನು ದತ್ತು ಪಡೆದಿದ್ದಾರೆ.

ಆದರೆ ಪತಿಯ ಈ ನಿರ್ಧಾರ ಪೂನಂಗೆ ಇಷ್ಟವಾಗಿರಲಿಲ್ಲ. ಹೆಣ್ಣು ಮಗು ದತ್ತು ಪಡೆದಿದ್ದು ಇಷ್ಟವಿಲ್ಲದ ಕಾರಣ ಆಕೆಯ ಜೊತೆ ಅಸಭ್ಯವಾಗಿ ವರ್ತಿಸಲು ಪೂನಂ ಆರಂಭಿಸಿದ್ದಾಳೆ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ