ಇಯರ್ ಫೋನ್ ನಿಂದ ತಮ್ಮನನ್ನೇ ಮುಗಿಸಿದ ಖತರ್ನಾಕ್ ಅಕ್ಕ!

ಶುಕ್ರವಾರ, 16 ಏಪ್ರಿಲ್ 2021 (09:31 IST)
ಲಕ್ನೋ: ಸ್ನೇಹಿತನೊಂದಿಗೆ ಚ್ಯಾಟ್ ಮಾಡುತ್ತಿದ್ದನ್ನು ವಿರೋಧಿಸಿದ್ದಕ್ಕೆ ಸ್ವಂತ ಅಕ್ಕನೇ ತನ್ನ ತಮ್ಮನನ್ನು ಇಯರ್ ಫೋನ್ ಕೇಬಲ್ ನಿಂದ ಉಸಿರುಗಟ್ಟಿಸಿ ಜೀವ ತೆಗೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


9 ವರ್ಷದ ಸಹೋದರನನ್ನು 15 ವರ್ಷದ ಅಕ್ಕ ಹತ್ಯೆ ಮಾಡಿದ್ದಾಳೆ. ಬಳಿಕ ಮೃತದೇಹವನ್ನು ಸ್ಟೋರ್ ರೂಂನಲ್ಲಿ ಅಡಗಿಸಿಟ್ಟಿದ್ದಾಳೆ.  ಈ ವೇಳೆ ಮನೆಯಲ್ಲಿ ಪೋಷಕರಿರಲ್ಲ ಎನ್ನಲಾಗಿದೆ.

ಮನೆಗೆ ಬಂದ ಪೋಷಕರು ಮಗನನ್ನು ಕಾಣದೇ ಹೋದಾಗ ಪೊಲೀಸರಿಗೆ ದೂರು ನೀಡಿದ್ದಾರೆ. ಮರುದಿನ ಮನೆಯ ಸ್ಟೋರ್ ರೂಂನಿಂದ ವಾಸನೆ ಬರುತ್ತಿದ್ದಾಗ ಸಂಶಯಗೊಂಡು ತೆರೆದು ನೋಡಿದಾಗ ಮೃತದೇಹ ಪತ್ತೆಯಾಗಿದೆ. ಕೂಲಂಕುಷವಾಗಿ ಪರಿಶೀಲಿಸಿದಾಗ ಅಕ್ಕನೇ ಹತ್ಯೆ ಮಾಡಿರುವುದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ