ಅಕ್ಕನ ಲವ್ವಿ ಡವ್ವಿ ಬಯಲು ಮಾಡಿದ್ದಕ್ಕೆ ತಂಗಿಯ ಜೀವ ಖತಂ

ಸೋಮವಾರ, 24 ಆಗಸ್ಟ್ 2020 (10:21 IST)
ನವದೆಹಲಿ: ರಾಯಪುರದಲ್ಲಿ 11 ವರ್ಷದ ಬಾಲಕಿಯೊಬ್ಬಳು ತನ್ನ ಅಕ್ಕ ಮತ್ತು ಆಕೆಯ ಗೆಳೆಯನ ಲವ್ವಿ ಡವ್ವಿ ವ್ಯವಹಾರ ನೋಡಿದ ತಪ್ಪಿಗೆ ಪ್ರಾಣವನ್ನೇ ಬಲಿಕೊಡಬೇಕಾಗಿ ಬಂದಿದೆ.


16 ವರ್ಷದ ಯುವತಿ ತನ್ನ ಪ್ರಿಯಕರನ ಜತೆ ಸೇರಿಕೊಂಡು ತನ್ನ ತಂಗಿಯನ್ನೇ ಉಸಿರುಗಟ್ಟಿಸಿ ಜೀವ ತೆಗೆದ ಬಳಿಕ ಚಾಕುವಿನಿಂದ ಇರಿದಿದ್ದಾಳೆ. ಮೊದಲಿಗೆ ಮೊಬೈಲ್ ಕೊಡಲಿಲ್ಲವೆಂದು ಇಬ್ಬರ ನಡುವೆ ನಡೆದ ಜಗಳದಲ್ಲಿ ಆಕೆಗೆ ಚಾಕುವಿನಿಂದ ಇರಿದೆ ಎಂದು ಆರೋಪಿ ಯುವತಿ ನಾಟಕವಾಡಿದ್ದಳು. ಆದರೆ ಸಂಶಯಗೊಂಡ ಪೊಲೀಸರು ಆಕೆಯ ಮೊಬೈಲ್ ಪರಿಶೀಲಿಸಿದಾಗ ಇದು ಪ್ರಿಯಕರನ ಜತೆ ಸೇರಿಕೊಂಡು ಮಾಡಿದ ಉದ್ದೇಶಪೂರ್ವಕ ಹತ್ಯೆ ಎಂದು ಬಯಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ