ಕಾಮುಕರಿಂದ ಶೀಲ ಕಳೆದುಕೊಂಡ ಸಹೋದರಿಯರು ಮನೆಗೆ ಬಂದು ಮಾಡಿದ್ದೇನು ಗೊತ್ತಾ?!
ಗುರುವಾರ, 10 ಸೆಪ್ಟಂಬರ್ 2020 (12:30 IST)
ಕೋಲ್ಕೊತ್ತಾ: ಕಾಮುಕರಿಂದ ಸಾಮೂಹಿಕವಾಗಿ ಮಾನಭಂಗಕ್ಕೊಳಗಾದ ಸಹೋದರಿಯರಿಬ್ಬರು ನೋವಿನಿಂದ ತಮ್ಮ ಜೀವ ಕೊನೆಗಾಣಿಸಲು ಯತ್ನಿಸಿದ ಘಟನೆ ಪಶ್ಚಿಮ ಬಂಗಾಲದಲ್ಲಿ ನಡೆದಿದೆ.
ಬುಡಕಟ್ಟು ಜನಾಂಗದ 14 ಮತ್ತು 16 ರ ಹರೆಯದ ಅಪ್ರಾಪ್ತ ಯುವತಿಯರು ವಿಷ ಸೇವಿಸಿ ಪ್ರಾಣ ತ್ಯಜಿಸಲು ಪ್ರಯತ್ನಿಸಿದ್ದಾರೆ. ಇವರಲ್ಲಿ ಓರ್ವ ಯುವತಿ ಸಾವಿಗೀಡಾದರೆ ಇನ್ನೊಬ್ಬಾಕೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.