ಲಕ್ನೋ : ಉತ್ತರ ಪ್ರದೇಶದ ಮಿರ್ಜಾಪುರದ ಆಸ್ಪತ್ರೆಯೊಂದರಲ್ಲಿ ಸ್ವಚ್ಛತಾ ಸಿಬ್ಬಂದಿಯೊಬ್ಬ ಗರ್ಭಿಣಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಮಹಿಳೆ ವಾಶ್ ರೂಂಗೆ ಹೋಗಿದ್ದ ವೇಳೆ ಆರೋಪಿ ತನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ ಎಂದು ದೂರು ನೀಡಿದ್ದಾರೆ. ಈ ಕುರಿತು ಉನ್ನತ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾ ಆಸ್ಪತ್ರೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಮೇ 7ರ ಶನಿವಾರ ರಾತ್ರಿ ಮಿರ್ಜಾಪುರದ ವಿಭಾಗೀಯ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಮೂರು ತಿಂಗಳ ಗರ್ಭಿಣಿಯಾಗಿದ್ದ ಮಹಿಳೆ ಅನಾರೋಗ್ಯದ ಹಿನ್ನೆಲೆಯಲ್ಲಿ ಪತಿ ಆಸ್ಪತ್ರೆಗೆ ಕರೆದೊಯ್ದಿದ್ದರು. ರಾತ್ರಿ 9 ರಿಂದ 10 ಗಂಟೆಯ ನಡುವೆ ಸಂತ್ರಸ್ತೆ ತನ್ನ ವಾರ್ಡ್‌ನಲ್ಲಿರುವ ವಾಶ್‌ರೂಮ್‌ಗೆ ಹೋಗಿದ್ದಳು, ಈ ವೇಳೆ ಸ್ವಚ್ಛತಾ ಸಿಬ್ಬಂದಿ ಅತ್ಯಾಚಾರ ಎಸಗಿದ್ದಾನೆ.
ಆಕೆ ಮಾಡಿರುವ ಆರೋಪದ ಪ್ರಕಾರ, ಸ್ವಚ್ಛತೆಯ ಕೆಲಸ ಮಾಡುವ ವ್ಯಕ್ತಿ ಸ್ನಾನಗೃಹಕ್ಕೆ ನುಗ್ಗಿ, ಅವಳನ್ನು ವಿವಸ್ತ್ರಗೊಳಿಸಿ ಅವಳ ಬಟ್ಟೆಗಳನ್ನು ಎಸೆದಿದ್ದ, "ನೀವು ಈಗ ಬಟ್ಟೆಯಿಲ್ಲದೆ ಎಲ್ಲಿಗೆ ಹೋಗುತ್ತೀರಿ?" ಎಂದೂ ಪ್ರಶ್ನೆ ಮಾಡಿದ್ದಾರೆ. ಬಳಿಕ ಆಕೆಯ ಬಾಯಿಯನ್ನು ಬಲವಂತವಾಗಿ ಮುಚ್ಚಿ ಅತ್ಯಾಚಾರ ಎಸಗಿದ್ದಾನೆ. ಕೊನೆಗೆ ಆಕೆ ಕಿರುಚಾಡಿದಾಗ, ಸಂತ್ರಸ್ತೆಯ ಮಾತು ಕೇಳಿ ಸ್ಥಳಕ್ಕಾಗಮಿಸಿದ ಇತರ ಮಹಿಳೆಯರು ನೋಡುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದಾನೆ. ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮನೆಗೆ ತೆರಳಿ ಪತಿಗೆ ನಡೆದ ಘಟನೆಯನ್ನು ಹೇಳಿದ್ದಾಳೆ.
ಪತಿ ಆಕೆಯನ್ನು ಜಿಲ್ಲಾ ಮಹಿಳಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಅವರು ಪೊಲೀಸರಿಗೆ ಸಂಪೂರ್ಣ ಘಟನೆಯ ವರದಿಯನ್ನು ಸಲ್ಲಿಸಿದರು. ಆಸ್ಪತ್ರೆಯ ಮುಖ್ಯಸ್ಥ ಪ್ರವೀಣ್ ಕುಮಾರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಜಯ್ ಕೆ ಸಿಂಗ್ ಕೂಡ ಸಂತ್ರಸ್ತೆ ಮತ್ತು ಆಕೆಯ ಪತಿಯಿಂದ ಘಟನೆಯ ಬಗ್ಗೆ ವಿಚಾರಿಸಲು ಆಗಮಿಸಿದರು. ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಪತ್ತೆಯಾಗಿದ್ದು, ಆರೋಪಿಗಳ ಪತ್ತೆಗೆ ತಂಡವನ್ನು ರಚಿಸಲಾಗಿದೆ ಎಂದು ಕುಮಾರ್ ಹೇಳಿದ್ದಾರೆ.
ಏತನ್ಮಧ್ಯೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ), ಸಂಜಯ್ ಕುಮಾರ್ ವರ್ಮಾ, ' ಈ ಕುರಿತಂತೆ ಪ್ರಕರಣ ದಾಖಲಿಸಲಾಗಿದೆ ಮತ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಶೀಘ್ರವೇ ಆರೋಪಿಯನ್ನು ಬಂಧಿಸಲಾಗುವುದು ಎಂದಿದ್ದಾರೆ.