ಜೈಲು ಸಿಬ್ಬಂದಿಯ ಕಣ್ಣಿಗೆ ಖಾರದ ಪುಡಿ ಎರಚಿ 16 ಮಂದಿ ಖೈದಿಗಳು ಪರಾರಿ

ಬುಧವಾರ, 7 ಏಪ್ರಿಲ್ 2021 (10:19 IST)
ಜೈಪುರ : ಜೈಲಿನ ಕಾವಲುಗಾರರ ಕಣ್ಣಿಗೆ ಖಾರದ ಪುಡಿ ಎರಚಿ  ಖೈದಿಗಳು ಜೈಲಿನಿಂದ ತಪ್ಪಿಸಿಕೊಂಡ ಘಟನೆ ರಾಜಸ್ಥಾನದ ಜೋಧ್ಪುರ್ ಜಿಲ್ಲೆಯ ಫಲೋಡಿ ಪಟ್ಟಣದಲ್ಲಿ ನಡೆದಿದೆ.

ಘಟನೆಯಲ್ಲಿ 7 ಮಂದಿ ಖೈದಿಗಳು ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಸರಿಯಾಗಿ ಪರಿಶೀಲನೆ ನಡೆಸಿದಾಗ 16 ಮಂದಿ ಖೈದಿಗಳು ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಮೇಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಹಾಗೇ ತಪ್ಪಿಸಿಕೊಂಡವರನ್ನು ಹುಡುಕಲು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿಲಾಗಿದೆ. ಜೈಲು ಸಿಬ್ಬಂದಿಯ ಪ್ರಮುಖ ದೋಷಗಳು ಖೈದಿಗಳು ತಪ್ಪಿಸಿಕೊಳ್ಳಲು ಕಾರಣ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ