ಸ್ಮೃತಿ ಇರಾನಿ ಅಮಿತಾಭ್ ಬಚ್ಚನ್ ಆಗಲು ಹೊರಡ್ತಾರೆ, ಕೊನೆಗೆ ಆಗೋದು ವಿಲನ್!

ಶನಿವಾರ, 6 ಏಪ್ರಿಲ್ 2019 (09:31 IST)
ನವದೆಹಲಿ: ರಾಹುಲ್ ಗಾಂಧಿ ವಿರುದ್ಧ ಅಮೇಠಿಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಯುತ್ತಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಗ್ಗೆ ಕಾಂಗ್ರೆಸ್ ಲೇವಡಿ ಮಾಡಿದ್ದಾರೆ.


ಅಮೇಠಿಯಲ್ಲಿ ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ ಸ್ಮೃತಿ ಇರಾನಿ ಅಮಿತಾಬ್ ಬಚ್ಚನ್ ಆಗಲು ಹೊರಡ್ತಾರೆ. ಆದರೆ ಕೊನೆಗೆ ಅವರು ವಿಲನ್ ಆಗುತ್ತಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಲೇವಡಿ ಮಾಡಿದ್ದಾರೆ.

‘ಸ್ಮೃತಿ ಇರಾನಿಯ ಮನದಲ್ಲಿರುವ ಸೋಲಿನ ಭಯ ನಮಗೆ ಅರ್ಥವಾಗುತ್ತದೆ. ಆಕೆಗೆ ಇದುವರೆಗೆ ಒಂದೇ ಒಂದು ಪಂಚಾಯತ್ ಚುನಾವಣೆ ಗೆಲ್ಲಲು ಸಾಧ್ಯವಾಗಿಲ್ಲ. ಈಗ ಮೂರನೇ ಸೋಲಿಗೆ ಸಿದ್ಧತೆ ನಡೆಸಿದ್ದಾರೆ. ಹಾಗಿದ್ದರೂ ಅವರಿಗೆ ರಾಜ್ಯ ಸಭೆ ಟಿಕೆಟ್ ನೀಡಿ ಮೋದಿ ಗೆಲ್ಲಿಸುತ್ತಾರೆ. ಹಾಗೆ ಭಯ ಬೇಕಾಗಿಲ್ಲ. ಆಕೆ ಹೆಚ್ಚಾಗಿ ಕೋಪದಲ್ಲಿರುತ್ತಾರೆ, ಅಮಿತಾಬ್ ಬಚ್ಚನ್ ರನ್ನು ಅನುಕರಿಸಲು ಹೋಗುತ್ತಾರೆ. ಆದರೆ ವಿಪರ್ಯಾಸವೆಂದರೆ ಕತೆಯಲ್ಲಿನ ಖಳನಾಯಕಿಯಾಗುತ್ತಾರೆ’ ಎಂದು ರಣದೀಪ್ ವ್ಯಂಗ್ಯ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ