ರಾಹುಲ್ ಕಾಂಗ್ರೆಸ್ ಸಾರಥಿಯಾದರೆ, ಬಿಜೆಪಿಗೆ ಅಚ್ಛೇ ದಿನ್!

ಗುರುವಾರ, 2 ಜೂನ್ 2016 (09:35 IST)
ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಲ್ಲಿ ಆಸೀನರಾಗುತ್ತಾರೆ ಎಂಬ ಊಹಾಪೋಹಗಳ ಹಿನ್ನೆಲೆಯಲ್ಲಿ 'ಅವರು ಅಧ್ಯಕ್ಷರಾದರೆ ಬಿಜೆಪಿಗೆ ಉತ್ತಮ ದಿನಗಳು ಬರುತ್ತವೆ', ಎಂದು ಬಿಜೆಪಿ ನಾಯಕಿ, ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಅಣಕವಾಡಿದ್ದಾರೆ. 

ರಾಷ್ಟ್ರೀಯ ಸುದ್ದಿ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿ ಮಾತನಾಡುತ್ತಿದ್ದ ಅವರು, "ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದರೆ ನಮಗೆ ಅಚ್ಛೇ ದಿನ್ ಬಂದ ಹಾಗೆ", ಎಂದು ಹೇಳಿದ್ದಾರೆ. 
 
ಸದ್ಯದಲ್ಲಿಯೇ ರಾಹುಲ್ ಕಾಂಗ್ರೆಸ್ ಸಾರಥ್ಯವನ್ನು ವಹಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕಳೆದೆರಡು ದಿನಗಳಿಂದ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ ಅಂತಹ ಯಾವುದೇ ತಕ್ಷಣದ ಸಾಧ್ಯತೆಯನ್ನು ಕಾಂಗ್ರೆಸ್ ತಳ್ಳಿ ಹಾಕಿದೆ. 
 
ಸದ್ಯ ತಮ್ಮ ಸಂಸದೀಯ ಕ್ಷೇತ್ರ ರಾಯ್ ಬರೇಲಿ ಪ್ರವಾಸದಲ್ಲಿರುವ ಸೋನಿಯಾ ಗಾಂಧಿ ಅವರು ಸಹ ಈ ಕುರಿತು ತುಟಿ ಪಿಟಿಕ್ ಎನ್ನುತ್ತಿಲ್ಲ. 
 
ರಾಹುಲ್ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಪದವಿಯನ್ನು ಹಸ್ತಾಂತರಿಸಲಾಗುತ್ತಿದೆ ಎಂಬ ಮಾಧ್ಯಮ ವರದಿಗಳ ಬಗ್ಗೆ ಅವರನ್ನು ಕೇಳಲಾಗಿ ಈ ಕುರಿತು ಏನನ್ನೂ ಪ್ರತಿಕ್ರಿಯಿಸದೆ ಅವರು ಕಾರನ್ನೇರಿ ಹೊರಟರು ಎಂದು ತಿಳಿದು ಬಂದಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ