ಸಾಮಾಜಿಕ ಜಾಲತಾಣದಲ್ಲಿ ಹಾಕುವ ಫೋಟೋ ಐಟಿ ಇಲಾಖೆಗೆ ಮಾಹಿತಿ ಕೊಡುತ್ತೆ..!

ಸೋಮವಾರ, 11 ಸೆಪ್ಟಂಬರ್ 2017 (10:55 IST)
ದುಬಾರಿ ವಸ್ತುಗಳನ್ನ ಖರೀದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವವರ ಮೇಲೆ ಐಟಿ ಇಲಾಖೆ ಹದ್ದಿನ ಕಣ್ಣಿಡಲು ನಿರ್ಧರಿಸಿದೆ. ಇದರ ಆಧಾರದ ಮೇಲೆ ವ್ಯಕ್ತಿಯ ಆದಾಯ ಮತ್ತು ಕಪ್ಪು ಹಣದ ಸಂಗ್ರಹದ ಮಾಹಿತಿ ಕಲೆ ಹಾಕಲು ತೆರಿಕೆ ಇಲಾಖೆ ಮುಂದಾಗಿದೆ.

ದುಬಾರಿ ಬೆಲೆಯ ಕಾರು, ವಾಚ್, ವಿಶ್ವದ ದುಬಾರಿ ಪ್ರದೇಶಗಳಿಗೆ ಭೇಟಿ ವಿಲಾಸಿ ಜೀವನದ ಫೋಟೋಗಳನ್ನ ವಿಶ್ಲೇಷಣೆ ಮಾಡುವ ಆದಾಯ ತೆರಿಗೆ ಇಲಾಖೆ, ದುಬಾರಿ ಖರ್ಚಿಗೆ ಈತನ ಆದಾಯ ಎಷ್ಟಿದೆ..? ತೆರಿಗೆ ಕಟ್ಟಿದ್ದಾನಾ..? ಐಟಿ ರಿಟರ್ನ್ಸ್ ವೇಳೆ ಕೊಟ್ಟಿರುವ ಮಾಹಿತಿ ಮತ್ತು ಆತನ ಜೀವನಶೈಲಿ ತದ್ವಿರುದ್ಧವಾಗಿದೆಯೇ ಎಂಬ ಬಗ್ಗೆ ಐಟಿ ಇಲಾಖೆ ಪರಿಶೀಲನೆ ನಡೆಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣಿಡಲೆಂದೇ ಆದಾಯ ತೆರಿಗೆ ಇಲಾಖೆ ಪ್ರಾಜೆಕ್ಟ್ ಇನ್ ಸೈಟ್ ಯೋಜನೆ ಆರಂಭಿಸಿದ್ದು, ಮುಂದಿನ ತಿಂಗಳಿಂದ ಜಾರಿಗೆ ಬರಲಿದೆ. ಹೀಗಾಗಿ, ಆದಾಯ ತೆರಿಗೆ ಇಲ಻ಖೆಗೆ ತಪ್ಪು ಮಾಹಿತಿ ನೀಡಿ ವಿಲಾಸಿ ಜೀವನ ನಡೆಸುವವರ ಬಂಡವಾಳವನ್ನ ಸಾಮಾಜಿಕ ಜಾಲತಾಣಗಳ ಮೂಲಕವೇ ಬಯಲು ಮಾಡಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ