ಇಲ್ಲಿನ ಪ್ರತಾಪಗಢ ಜಿಲ್ಲೆಯ ಮನೆಯಲ್ಲಿ ಶೌಚಾಲಯ ಇಲ್ಲದ ಕಾರಣಕ್ಕೆ ಇಲ್ಲಿ ಮುಸ್ಲಿಂ ಮಹಿಳೆಯರು ಅನಿವಾರ್ಯವಾಗಿ ಬಯಲಲ್ಲೇ ಶೌಚಕಾರ್ಯ ಮುಗಿಸಿಲು ಬಂದಿದ್ದರು. ಇವರು ಶೌಚಕಾರ್ಯದಲ್ಲಿ ತೊಡಗಿದ್ದಾಗ ಅವರ ಫೋಟೋ ಮತ್ತು ವಿಡಿಯೋ ತೆಗೆಯಲು ಮುಂದಾದ ಮುನಿಸಿಪಾಲಿಟಿ ಕಾರ್ಮಿಕರನ್ನು ಸಾಮಾಜಿಕ ಕಾರ್ಯಕರ್ತ ಜಾಫರ್ ಹುಸೇನ್ ಎಂಬುವವರು ತಡೆದಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಾರ್ಮಿಕರು ಜಾಫರ್ ನನ್ನು ಹೊಡೆದು ಸಾಯಿಸಿದ್ದಾರೆ.
ಅಸಲಿಗೆ ನಗರ ಪರಿಷತ್ ಕಮಿಷನರ್ ಅಶೋಕ್ ಜೈನ್, ಬಗ್‌ವಾಸಾ ಕಾಚಿ ಗ್ರಾಮದಲ್ಲಿ ಬಯಲು ಬಹಿರ್ದೆಶೆಯಲ್ಲಿ ನಿರತರಾಗಿದ್ದ ಮುಸ್ಲಿಂ ಮಹಿಳೆಯರ ಫೋಟೋ ವಿಡಿಯೋ ತೆಗೆಯುವಂತೆ ಮುನಿಸಿಪಲ್ ಕೌನ್ಸಿಲ್ ಕಾರ್ಮಿಕರಿಗೆ ಆದೇಶಿಸಿದ್ದರಂತೆ ಹೀಗೆಂದು ಸಿಪಿಎಂ ಆರೋಪಿಸಿದೆ. ಸಾಮಾಜಿಕ ಕಾರ್ಯಕರ್ತನನ್ನು ಹೊಡೆದು ಸಾಯಿಸಿದ ಕಾರ್ಮಿಕ ಯುವಕರಿಗೆ ಕಠಿಣ ಶಿಕ್ಷೆ ನೀಡುವಂತೆಯೂ ಆಗ್ರಹಿಸಿದೆ.