ಬೆಂಗಳೂರು : ಮಗುವಿನ ಬೆಳವಣಿಗೆಗೆ ತಾಯಿಯ ಎದೆಹಾಲು ತುಂಬಾ ಅವಶ್ಯಕ. ಆದರೆ ಕೆಲವು ತಾಯಂದಿರು ಕೆಲಸಕ್ಕೆ ಹೋಗುವ ಕಾರಣದಿಂದ ಮಗುವಿಗೆ ಬಾಟಲಿ ಹಾಲನ್ನು ನೀಡಲು ಶುರುಮಾಡುತ್ತಾರೆ. ಇದು ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಮಗುವಿಗೆ ಬಾಟಲಿ ಹಾಲನ್ನು ಯಾವಾಗ ನೀಡಬೇಕು ಎಂಬುದನ್ನು ತಿಳಿದುಕೊಳ್ಳಿ.
ಮಗುವು ಸಂಪೂರ್ಣವಾಗಿ ಹಾಲು ಕುಡಿಯಲು ಕಲಿತಾಗ, ನೀವು ಬಾಟಲಿ ಹಾಲನ್ನು ನೀಡಬಹುದು. ಮಗುವಿಗೆ ದಿನಕ್ಕೆ ಒಂದು ಅಥವಾ 2 ಬಾರಿ ಮಾತ್ರ ಬಾಟಲಿ ಹಾಲನ್ನು ನೀಡಬಹುದು. ಹಾಗೂ ಅದರ ಜೊತೆಗೆ ಹೆಚ್ಚಿನ ಸಮಯದಲ್ಲಿ ಸ್ತನ್ಯಪಾನ ಮಾಡಿಸಬೇಕು. ಸ್ತನ್ಯಪಾನ ಮಾಡಿದ ತಕ್ಷಣ ಬಾಟಲಿ ಹಾಲನ್ನು ನೀಡಬೇಡಿ.