ಯುವತಿಯ ಖಾಸಗಿ ಅಂಗಾಂಗಗಳಿಗೆ ಥಳಿಸಿದ ಅಮ್ಮ-ಮಗ

ಮಂಗಳವಾರ, 2 ಫೆಬ್ರವರಿ 2021 (10:05 IST)
ಜೈಪುರ: ದಲಿತ ಯುವತಿಯೊಬ್ಬಳ ಜೊತೆ ವಾಗ್ವಾದ ನಡೆಸಿದ ಅಮ್ಮ-ಮಗನ ಜೋಡಿ ಕೊನೆಗೆ ಆಕೆಯನ್ನು ಸಾರ್ವಜನಿಕವಾಗಿ ವಿವಸ್ತ್ರಗೊಳಿಸಿ ಖಾಸಗಿ ಅಂಗಾಂಗಗಳಿಗೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.


ಎರಡು ದಿನಗಳ ಹಿಂದೆ ಕ್ಷುಲ್ಲುಕ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದವಾಗಿತ್ತು. ಇದೇ ಸೇಡು ತೀರಿಸಿಕೊಳ್ಳಲು ಮಗನ ಜೊತೆ ಬಂದ ಆರೋಪಿ ಮಹಿಳೆ ಹಿಗ್ಗಾ ಮುಗ್ಗಾ ಹಲ್ಲೆ ನಡೆಸಿದ್ದಾಳೆ. ಈ ಘಟನೆಯನ್ನು ಗ್ರಾಮಸ್ಥರು ಮೂಕರಾಗಿ ನೋಡುತ್ತಿದ್ದರೇ ವಿನಾ ಸಹಾಯಕ್ಕೆ ಬಂದಿರಲಿಲ್ಲ. ಇದೀಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ