ಗೋವಾದಲ್ಲಿ ಸೋನಿಯಾ ಗಾಂಧಿ ಜಾಲಿ ರೈಡ್!
ಗೋವಾದ ತಮ್ಮ ಫೇವರಿಟ್ ರೆಸಾರ್ಟ್ ನಲ್ಲಿ ಒಂದು ವಾರದ ಮಟ್ಟಿಗೆ ತಂಗಿರುವ ಸೋನಿಯಾ ಸಾಮಾನ್ಯರಂತೆ ಕಳೆಯುತ್ತಿದ್ದಾರೆ. ರೆಸಾರ್ಟ್ ನಲ್ಲಿ ಸೈಕಲ್ ರೈಡ್ ಮಾಡಿಕೊಂಡು, ಅಲ್ಲಿಗೆ ಬಂದ ಪ್ರವಾಸಿಗರ ಜತೆ ಮಾತನಾಡುತ್ತಾ, ಸೆಲ್ಫೀ ತೆಗೆಸಿಕೊಳ್ಳುತ್ತಾ ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ.
ಇದು ಸೋನಿಯಾಗೆ ಅತೀ ಮೆಚ್ಚಿನ ತಾಣವಂತೆ. ಇಲ್ಲಿ ಇದೀಗ ರಜೆಯ ಖುಷಿಯ ಅನುಭವಿಸುತ್ತಿರುವ ದ.ಭಾರತದ ಜನಪ್ರಿಯ ಮಸಾಲೆ ದೋಸೆ ಸೇರಿದಂತೆ ಊಟ ತಿಂಡಿ ಸೇವಿಸುತ್ತಾ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.