ಓಎಲ್ಎಕ್ಸ್`ನಲ್ಲಿ ಹಸು, ಎಮ್ಮೆಗಳ ವ್ಯಾಪಾರ ಮಾಡುತ್ತಿರುವ ರೈತ
ಓಎಲ್ಎಕ್ಸ್ ಎಂದರೆ ಟಿವಿ, ಫ್ರಿಡ್ಜ್, ಮೊಬೈಲ್, ವಾಹನಗಳು ಸೇರಿದಂತೆ ದಿನಬಳಕೆ ವಸ್ತುಗಳ ಕೊಂಡು ಮಾರುವ ವ್ಯವಹಾರ ನಡೆಯುವುದನ್ನಷ್ಟೇ ನೀವು ನೋಡಿರುತ್ತಿರಿ. ಆದರೆ, ಇಲ್ಲೊಬ್ಬ ರೈತ ಓಎಲ್`ಎಕ್ಸ್`ನಲ್ಲೇ ದನದ ವ್ಯಾಪಾರ ಮಾಡುತ್ತಿದ್ದಾನೆ. ಅಷ್ಟೇ ಅಲ್ಲ, ಆತನ ವ್ಯವಹಾರದಲ್ಲಿ ಯಶಸ್ಸು ಕೂಡ ಕಂಡಿದ್ದಾನೆ.
ಓಎಲ್ಎಕ್ಸ್`ನಲ್ಲಿ ಹಸುಗಳ ಪೋಟೋ ನೋಡುವ ಗ್ರಾಹಕರು ಬಳಿಕ ಸ್ಥಳಕ್ಕೆ ಭೇಟಿ ನೀಡಿ ಬೆಲೆ ಮತ್ತು ಹಸುಗಳ ಜಾತಿ ಬಗ್ಗೆ ಮಾಹಿತಿ ಪಡೆಯುತ್ತಾರೆ. ಬಳಿಕ ವ್ಯಾಪಾರ ಕುದುರಿಸುತ್ತಾರೆ.