ಕಳೆದ ವರ್ಷ ಸೇವೆಯಿಂದ ನಿವೃತ್ತರಾದ ಉತ್ತರಪ್ರದೇಶದ ಮೀರತ್ ಜಿಲ್ಲೆಯ ನಿವೃತ್ತ ಇಂಜಿನಿಯರ್ ಜೆಪಿ ಸಿಂಗ್, ಸರ್ದಾನಾ ಪಟ್ಟಣದಲ್ಲಿ ಮೋದಿ ಮಂದಿರ ದೇವಾಲಯವನ್ನು ನಿರ್ಮಿಸಿ 100 ಅಡಿ ಎತ್ತರದ ಪ್ರಧಾನಿ ಮೋದಿ ಪ್ರತಿಮೆಯನ್ನು ಸ್ಥಾಪಿಸುವ ಯೋಜನೆ ಹೊಂದಿದ್ದಾರೆ. ಆಕ್ಟೋಬರ್ 23 ರಂದು ಭೂಮಿ ಪೂಜೆ ನೆರವೇರಲಿದ್ದು, ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.