ನವದೆಹಲಿ : ಬಾಹ್ಯಾಕಾಶ ಅಧ್ಯಯನಕ್ಕೆ ಗಗನಯಾತ್ರಿಗಳನ್ನು ಕಳುಹಿಸಲು ಸ್ಪೇಸ್ಎಕ್ಸ್ ವಿನ್ಯಾಸಗೊಳಿಸಿದ್ದ ಅತ್ಯಂತ ಶಕ್ತಿಶಾಲಿ ರಾಕೆಟ್ ಸ್ಟಾರ್ಶಿಪ್ನ ಪರೀಕ್ಷಾರ್ಥ ಹಾರಾಟದ ವೇಳೆ ಗುರುವಾರ ಸ್ಫೋಟಗೊಂಡಿದೆ.
ಟೆಕ್ಸಾಸ್ನ ಬೊಕಾ ಚಿಕಾದಲ್ಲಿರುವ ಖಾಸಗಿ ಸ್ಪೇಸ್ಎಕ್ಸ್ ಬಾಹ್ಯಾಕಾಶ ನಿಲ್ದಾಣದಿಂದ ಸ್ಟಾರ್ಶಿಪ್ನ ಮೊದಲ ಪರೀಕ್ಷಾರ್ಥ ಹಾರಾಟಕ್ಕೆ ಬೆಳಗ್ಗೆ 8:33ಕ್ಕೆ ಅದನ್ನು ಉಡಾವಣೆ ಮಾಡಲಾಯಿತು.
ರಾಕೆಟ್ ಮೂರು ನಿಮಿಷಗಳ ಹಾರಾಟದ ನಂತರ ಸ್ಟಾರ್ಶಿಪ್ ಬಾಹ್ಯಾಕಾಶ ನೌಕೆಯನ್ನು ಮೊದಲ ಹಂತದಲ್ಲಿ ಬೇರ್ಪಡಿಸಲು ನಿಗದಿಪಡಿಸಲಾಗಿತ್ತು. ಆದರೆ ಬೇರ್ಪಡಿಸಲು ವಿಫಲವಾಗಿ ರಾಕೆಟ್ ಸ್ಫೋಟಗೊಂಡಿತು ಎಂದು ಸ್ಪೇಸ್ಎಕ್ಸ್ ಟ್ವಿಟ್ಟರ್ನಲ್ಲಿ ಪ್ರಕಟಿಸಿದೆ.