ವಾಷಿಂಗ್ಟನ್ : ವಿಶ್ವದ ಶ್ರೀಮಂತ ಎಲೋನ್ ಮಸ್ಕ್ ನಾಸಾ ತೆಗೆದ ಬಾಹ್ಯಾಕಾಶದ ಚಿತ್ರವೊಂದನ್ನು ಅಡುಗೆ ಮನೆಯಲ್ಲಿ ಹಾಕಿರುವ ಗ್ರಾನೈಟ್ಗೆ ಹೋಲಿಸಿ ಮೀಮ್ ಒಂದನ್ನು ಹಂಚಿಕೊಂಡಿದ್ದಾರೆ.
ಈ ಮೂಲಕ ನಾಸಾ ಪ್ರಯತ್ನವನ್ನು ವ್ಯಂಗ್ಯವಾಗಿಸಿದ್ದಾರೆ. ಇತ್ತೀಚೆಗೆ ನಾಸಾ ತನ್ನ ಜೇಮ್ಸ್ ವೆಬ್ ಟೆಲಿಸ್ಕೋಪ್ನಿಂದ ತೆಗೆದ ಅತ್ಯಂತ ಹಳೆಯ ಎಂದರೆ, ಪ್ರಪಂಚ ಹುಟ್ಟಿದಾಗಿನ ಸಮಯದಲ್ಲಿ ಆಕಾಶ ಹೇಗೆ ಗೋಚರಿಸುತ್ತಿತ್ತು ಎಂದು ಬಹಿರಂಗಪಡಿಸುವ ಚಿತ್ರಗಳನ್ನು ಅಮೆರಿಕದ ವೈಟ್ಹೌಸ್ನಲ್ಲಿ ಅನಾವರಣಗೊಳಿಸಿತ್ತು.
ಇದೀಗ ಆ ಚಿತ್ರಗಳ ಪೈಕಿ ಒಂದು ಚಿತ್ರ ಕಿಚನ್ ಗೋಡೆಯ ಗ್ರಾನೈಟ್ ಹೋಲುತ್ತದೆ ಎಂದು ಮೀಮ್ ಮೂಲಕ ಹೇಳಿ ಮಸ್ಕ್ ಹಾಸ್ಯವಾಡಿದ್ದಾರೆ.