ನವದೆಹಲಿ: ಪಾರ್ಲಿಮೆಂಟ್ ಮುಂಭಾಗ ನಿನ್ನೆ ನಡೆದ ಹೈಡ್ರಾಮಾ ಬಳಿಕ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಕಟ್ಟುನಿಟ್ಟಿನ ನಿಯಮವೊಂದನ್ನು ಜಾರಿಗೆ ತಂದಿದ್ದಾರೆ. ಇನ್ನು ಮುಂದೆ ಸದಸ್ಯರು ಈ ಪ್ರದೇಶದಲ್ಲಿ ಪ್ರತಿಭಟನೆ ಮಾಡುವಂತಿಲ್ಲ ಎಂದಿದ್ದಾರೆ.
ಅಮಿತ್ ಶಾ ಅವರ ಅಂಬೇಡ್ಕರ್ ಕುರಿತ ಹೇಳಿಕೆ ಖಂಡಿಸಿ ನಿನ್ನೆ ವಿಪಕ್ಷ ಸಂಸದರು ಪಾರ್ಲಿಮೆಂಟ್ ನ ಮಕರ ದ್ವಾರದ ಬಳಿ ಪ್ರತಿಭಟನೆ ನಡೆಸುತ್ತಿದ್ದರು. ಅವರಿಗೆ ಎದುರಾಗಿ ಆಡಳಿತ ಪಕ್ಷದ ಸಂಸದರೂ ಪ್ರತಿಭಟನೆ ನಡೆಸಿದ್ದು ಈ ವೇಳೆ ಎರಡೂ ಪಕ್ಷದ ಸಂಸದರ ನಡುವೆ ಘರ್ಷಣೆಯಾಗಿದೆ.
ಘಟನೆಯಲ್ಲಿ ಬಿಜೆಪಿಯ ಇಬ್ಬರು ಸಂಸದರು ಗಾಯಗೊಂಡಿದ್ದು, ಆಸ್ಪತ್ರೆ ಸೇರುವಂತಾಗಿದೆ. ಈ ಬಗ್ಗೆ ಆಡಳಿತ ಪಕ್ಷ ಮತ್ತು ವಿಪಕ್ಷ ಎರಡೂ ದೂರ-ಪ್ರತಿ ದೂರು ಸಲ್ಲಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಈ ರೀತಿಯ ಘಟನೆ ನಡೆದಿರುವುದು ವಿಪರ್ಯಾಸ.
ಈ ಘಟನೆಯ ನಂತರ ಸ್ಪೀಕರ್ ಓಂ ಬಿರ್ಲಾ ಇನ್ನು ಮುಂದೆ ಸಂಸತ್ತಿನ ದ್ವಾರದ ಬಳಿ ಪ್ರತಿಭಟನೆ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾರೆ. ಇನ್ನು ಮುಂದೆ ಯಾವುದೇ ಪಕ್ಷದ ಸಂಸದರು ಸಂಸತ್ ಭವನದ ದ್ವಾರದಲ್ಲಿ ಪ್ರತಿಭಟನೆ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.