ಏರು ಧ್ವನಿಯಲ್ಲಿ ಮಾತನಾಡಿ, ಅನುಚಿತ ವರ್ತನೆ: ರಾಹುಲ್‌ ವಿರುದ್ಧ ಸಭಾಪತಿಗೆ ಬಿಜೆಪಿ ಸಂಸದೆ ಪತ್ರ

Sampriya

ಗುರುವಾರ, 19 ಡಿಸೆಂಬರ್ 2024 (19:07 IST)
Photo Courtesy X
ನವದೆಹಲಿ: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಅನುಚಿತ ವರ್ತನೆಯನ್ನು ಆರೋಪಿಸಿ ರಾಜ್ಯಸಭಾ ಸಂಸದ ಕೊನ್ಯಾಕ್ ಅವರು ಸಭಾಪತಿಗೆ ಪತ್ರ ಬರೆದಿದ್ದಾರೆ.

ಬಿಆರ್ ಅಂಬೇಡ್ಕರ್ ವಿರೋಧಿ ಹೇಳಿಕೆ ನೀಡಿದ ಆರೋಪದಲ್ಲಿ ಸಚಿವ ಅಮಿತ್ ಶಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.  ಬಿಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಆರೋಪದ ವಿರುದ್ಧ ಸಂಸತ್ತಿನ ಆವರಣದಲ್ಲಿ ಪ್ರತಿಭಟನೆಯ ವೇಳೆ ಕೇಸರಿ ಪಕ್ಷದ ಇಬ್ಬರು ಸಂಸದರು ಗಾಯಗೊಂಡರು. ಬಿಜೆಪಿಯ ನಾಗಾಲ್ಯಾಂಡ್ ಸಂಸದ ಎಸ್ ಫಾಂಗ್ನಾನ್ ಕೊನ್ಯಾಕ್ ಅವರು ಈ ವೇಳೆ ರಾಹುಲ್ ಗಾಂಧಿ ಅನುಚಿತವಾಗಿ ವರ್ತಿಸಿರುವುದಾಗಿ ಆರೋಪಿಸಿದ್ದಾರೆ.

ನನ್ನ ಘನತೆ ಮತ್ತು ಸ್ವಾಭಿಮಾನಕ್ಕೆ ರಾಹುಲ್ ಗಾಂಧಿ ನಡವಳಿಕೆಯಿಂದ ತೀವ್ರವಾಗಿ ಘಾಸಿಯಾಗಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ನಾನು ನನ್ನ ಕೈಯಲ್ಲಿ ಒಂದು ಫಲಕದೊಂದಿಗೆ ಮಕರ ದ್ವಾರದ ಮೆಟ್ಟಿಲುಗಳ ಕೆಳಗೆ ನಿಂತಿದ್ದೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ನನ್ನ ಬಳಿ ಬಂದು ಏರು ಧ್ವನಿಯಲ್ಲಿ ಮಾತನಾಡಿ, ನನ್ನ ಬಳಿ ಅಸಭ್ಯವಾಗಿ ವರ್ತಿಸಿದ್ದಾರೆ.  ಈ ವೇಳೆ ಒಬ್ಬ ಮಹಿಳಾ ಸದಸ್ಯನಾಗಿದ್ದ ನಾನು ತುಂಬಾ ಅನಾನುಕೂಲತೆಯನ್ನು ಅನುಭವಿಸಿದೆ. ನಾನು ಭಾರವಾದ ಹೃದಯದಿಂದ ಪಕ್ಕಕ್ಕೆ ಸರಿದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ