ಮೂವರಲ್ಲಿ ಒಬ್ಬರಿಗೆ ಈಗಲೂ ಕೊರೋನಾ ಅಪಾಯ!

ಗುರುವಾರ, 22 ಜುಲೈ 2021 (12:57 IST)
ನವದೆಹಲಿ: ದೇಶದಲ್ಲಿ ಕೊರೋನಾ ಅಲೆ ಕಡಿಮೆಯಾಗಿರಬಹುದು. ಹೆಚ್ಚಿನವರು ವ್ಯಾಕ್ಸಿನ್ ಪಡೆದುಕೊಂಡಿರಬಹುದು. ಹಾಗಿದ್ದರೂ ಕೊರೋನಾ ಅಪಾಯ ಕಡಿಮೆಯಾಗಿಲ್ಲ!


ಮೂವರ ಪೈಕಿ ಒಬ್ಬರು ಈಗಲೂ ಕೊರೋನಾ ಅಪಾಯದಲ್ಲೇ ಇದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಐಸಿಎಂಆರ್ ಡಿಜಿ ಬಲರಾಮ್ ಭಾರ್ಗವ್ ಎಚ್ಚರಿಸಿದ್ದಾರೆ.

ಒಟ್ಟು ಜನಸಂಖ್ಯೆಯ ಮೂರನೇ ಒಂದರಷ್ಟು ಜನರಿಗೆ ಆಂಟಿಬಾಡಿ ಇಲ್ಲ. ಹೀಗಾಗಿ ದೇಶದ 40 ಕೋಟಿ ಜನರಿಗೆ ಈಗಲೂ ಕೊರೋನಾ ಅಪಾಯವಿದೆ. 6-9 ವರ್ಷದವರೆಗಿನವರಲ್ಲಿ ಶೇ.57.2, 10-17 ವರ್ಷದೊಳಗಿನವರಿಗೆ 61.6 ಶೇಕಡಾ, 18-44 ವರ್ಷದೊಳಗಿನವರಿಗೆ 66.7 ಶೇಕಡಾ, 45-60 ವರ್ಷದೊಳಗಿನವರಲ್ಲಿ ಶೇ. 77.6 ಶೇಕಡಾ ರಷ್ಟು ಕೊರೋನಾ ಅಪಾಯದಲ್ಲಿದ್ದಾರೆ ಎಂದು ಬಲರಾಮ್ ಭಾರ್ಗವ್ ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ