ರಘುರಾಮ್ ರಾಜನ್ ಅರ್ಥಶಾಸ್ತ್ರ ಪದವಿ ಪಡೆದೇ ಇಲ್ಲ: ಸ್ವಾಮಿ

ಶುಕ್ರವಾರ, 26 ಆಗಸ್ಟ್ 2016 (15:29 IST)
ಆರ್‌ಬಿಐ ಗವರ್ನರ್ ಹುದ್ದೆಯಿಂದ ನಿವೃತ್ತರಾಗುತ್ತಿರುವ ರಘುರಾಮ್ ರಾಜನ್ ವಿರುದ್ಧ ಬಿಜೆಪಿಯ ಫೈರ್‌ಬ್ರಾಂಡ್ ನಾಯಕ, ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಮತ್ತೆ ಹೊಸ ಆರೋಪ ಮಾಡಿದ್ದಾರೆ. ಅವರು ಅರ್ಥಶಾಸ್ತ್ರ ಪದವಿಯನ್ನೇ ಹೊಂದಿಲ್ಲ ಎಂದು ಅವರು ವಾದಿಸುತ್ತಿದ್ದಾರೆ. 

ಊರ್ಜಿತ್ ಪಟೇಲ್ ಅವರನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಆಗಿ ಆಯ್ಕೆ ಮಾಡಿರುವುದಕ್ಕೆ ಸಂತಷ ವ್ಯಕ್ತ ಪಡಿಸಿರುವ ಅವರು ರಾಜನ್ ಉತ್ತರಾಧಿಕಾರಿಯಿಂದ ಬಹಳಷ್ಟು ನಿರೀಕ್ಷೆಗಳಿವೆ ಎಂದಿದ್ದಾರೆ.
 
ಪಟೇಲ್ ಹಲವಾರು ವರ್ಷಗಳಿಂದ ರಾಜನ್ ಅವರ ಸಹಾಯಕರಾಗಿದ್ದವರು. ಹೀಗಾಗಿ ಹೊಸ ಹುದ್ದೆ ಅವರಿಗೆ ಹೊಸದೆನಿಸಲಾರದು ಎಂದು ಸ್ವಾಮಿ ಹೇಳಿದ್ದಾರೆ.
 
ಪಟೇಲ್ ಯಾಲೆ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪಿಹೆಚ್‌ಡಿ ಪದವಿಯನ್ನು ಹೊಂದಿದ್ದಾರೆ. ರಘುರಾಮ್ ರಾಜನ್ ಅರ್ಥಶಾಸ್ತ್ರದಲ್ಲಿ ಪದವಿಯನ್ನೇ ಹೊಂದಿಲ್ಲ. ಎಂಜಿನಿಯರಿಂಗ್ ಪದವಿಯ ಬಳಿಕ ಮ್ಯಾನೇಜ್‌ಮೆಂಟ್ ಓದಿದ ಅವರಿಗೆ ಅರ್ಥಶಾಸ್ತ್ರದ ಬಗ್ಗೆ ಸಾಮಾನ್ಯ ಜ್ಞಾನವೂ ಇಲ್ಲ. ಊರ್ಜಿತ್ ಪಟೇಲ್ ಹಲವಾರು ವರ್ಷಗಳಿಂದ ಆರ್‌ಬಿಐ ಉಪಾಧ್ಯಕ್ಷರಾಗಿದ್ದರು. ಹೀಗಾಗಿ ಈ ಹುದ್ದೆ ಅವರಿಗೆ ಹೊಸದೆನಿಸದು. ಅವರಿಂದ ನಾನು ಹೆಚ್ಚಿನದನ್ನು ನಿರೀಕ್ಷಿಸುತ್ತೇನೆ ಎಂದಿದ್ದಾರೆ ಸ್ವಾಮಿ.

ವೆಬ್ದುನಿಯಾವನ್ನು ಓದಿ