ಇಂದು ವರ್ಷದ ಮೊದಲ ಸೂರ್ಯಗ್ರಹಣ: ಭಾರತೀಯರಿಗೆ ಆಚರಣೆಯಿದೆಯೇ?

ಗುರುವಾರ, 10 ಜೂನ್ 2021 (09:30 IST)
ಬೆಂಗಳೂರು: ಇಂದು ಈ ವರ್ಷದ ಮೊದಲ ಸೂರ್ಯಗ್ರಹಣಕ್ಕೆ ವಿಶ್ವ ಸಾಕ್ಷಿಯಾಗಲಿದೆ. ಆದರೆ ಭಾರತದಲ್ಲಿ ಈ ಗ್ರಹಣ ಗೋಚರವಾಗಲ್ಲ.


ಭಾರತದಲ್ಲಿ ಈ ಗ್ರಹಣ ಗೋಚರವಾಗಲ್ಲ. ಹೀಗಾಗಿ ಇದರ ಆಚರಣೆಯೂ ಅಗತ್ಯವಿಲ್ಲ. ಮಧ್ಯಾಹ್ನ 1.42 ಕ್ಕೆ ಆರಂಭವಾಗಿ ಸಂಜೆ 6.41 ಕ್ಕೆ ಗ್ರಹಣ ಕೊನೆಗೊಳ್ಳಲಿದೆ.

ಉತ್ತರ ಭಾರತದಲ್ಲಿ ಭಾಗಶಃ ಗೋಚರವಾದರೂ ಅಚ್ಚರಿಯಿಲ್ಲ. ಆದರೆ ದಕ್ಷಿಣ ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಂತೂ ಗೋಚರವಾಗಲ್ಲ. ಹೀಗಾಗಿ ಅನಗತ್ಯ ಊಹಾಪೋಹಗಳಿಗೆ ಕಿವಿಗೊಡಬೇಕಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ