ರಾಫೆಲ್ ಒಪ್ಪಂದದ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ಸುಪ್ರೀಂಕೋರ್ಟ್
ಗುರುವಾರ, 11 ಅಕ್ಟೋಬರ್ 2018 (11:59 IST)
ನವದೆಹಲಿ: ರಾಫೆಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಕೇಂದ್ರದ ಎನ್ ಡಿಎ ಸರ್ಕಾರ ರಹಸ್ಯ ಒಪ್ಪಂದ ಮಾಡಿಕೊಂಡಿದೆ ಎಂಬ ವಿವಾದಗಳ ಬೆನ್ನಲ್ಲೇ ಸುಪ್ರೀಂಕೋರ್ಟ್ ಕೇಂದ್ರವನ್ನು ಪ್ರಶ್ನೆ ಮಾಡಿದೆ.
ನ್ಯಾ. ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ ರಾಫೆಲ್ ಒಪ್ಪಂದದ ನಿರ್ಧಾರ ಮಾಡಿಕೊಂಡಿದ್ದು ಹೇಗೆ ಎಂಬ ವಿವರ ನೀಡುವಂತೆ ಕೇಂದ್ರವನ್ನು ಕೋರಿದೆ.
ಆದರೆ ರಾಫೆಲ್ ಒಪ್ಪಂದ ಮಾಡುವಾಗ ಮಾಡಿಕೊಂಡ ಹಣದ ಮೊತ್ತ ಮತ್ತು ಇತರ ತಾಂತ್ರಿಕ ವಿವರಗಳನ್ನು ಒದಗಿಸಬೇಕೆಂದಿಲ್ಲ ಎಂದಿದೆ. ಈ ನಡುವೆ ಕೇಂದ್ರದ ವಿರುದ್ಧ ರಾಫೆಲ್ ವಿಚಾರದಲ್ಲಿ ಹಗರಣದ ಆರೋಪ ಹೊರಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ಸುಪ್ರೀಂ ಕೋರ್ಟ್ ಪ್ರಶ್ನೆಗೆ ಮೋದಿ ಉತ್ತರಿಸಲೇಬೇಕಿದೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.