ಫೇಸ್ಬುಕ್, ಗೂಗಲ್`ನಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮುನ್ನ ಎಚ್ಚರ

ಬುಧವಾರ, 22 ಫೆಬ್ರವರಿ 2017 (10:44 IST)

ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ಹಲ್ಲೆ ಕುರಿತ ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಈ ರೀತಿಯ ವಿಡಿಯೋಗಳನ್ನ ಬ್ಲಾಕ್ ಮಾಡುವುದು ಮತ್ತು ಇದರ ಬಗ್ಗೆ ತನಿಖಾ ಸಂಸ್ಥೆಗಳಿಗೆ ವರದಿ ಕಳಿಸಿರುವ ಬಗ್ಗೆ ವಿವರಣೆ ನಿಡುವಂತೆ ಫೇಸ್ಬುಕ್, ಗೂಗಲ್, ಮೈಕ್ರೋಸಾಫ್ಟ್ ಮತ್ತು ಯಾಹೂ ಸಂಸ್ಥೆಗಳಿಗೆ ಸುಪ್ರೀಂಕೋರ್ಟ್ ತಾಕೀತು ಮಾಡಿದೆ.


ತುರ್ತಾಗಿ ಈ ರೀತಿಯ ವಿಡಿಯೋಗಳ ಅಪ್ಲೋಡ್ ತಡೆ ಮತ್ತು ಅದರ ಹಿಂದಿರುವ ವ್ಯಕ್ತಿಗಳನ್ನ ಪತ್ತೆಹಚ್ಚಲು ಒಂದು ಮೆಕ್ಯಾನಿಸಂನ ಅಗತ್ಯವಿದೆ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ. ಇದು ವ್ಯಕ್ತಿ ಗೌರವದ ವಿಷಯವಾಗಿದ್ದು, ಇವತ್ತಿನ ದಿನಗಳಲ್ಲಿ ಯಾವುದೇ ಭಯವಿಲ್ಲದೇ ಯಾರು ಬೇಕಾದರೂ ಯಾವುದೇ ವಿಡಿಯೋವನ್ನ ಗುರುತು ನೀಡದೇ ಅಪ್ಲೋಡ್ ಮಾಡಬಹುದಾಗಿದೆ ಎಂದು ನ್ಯಾಯಮೂರ್ತಿ ಮದನ್ ಬಿ ಲೋಕೂರ್ ಮತ್ತು ವಿ.ವಿ. ಲಲಿತ್ ನೇತೃತ್ವದ ಪೀಠ ಬೇಸರ ವ್ಯಕ್ತಪಡಿಸಿದೆ.

ಜಾಲತಾಣಗಳಾದ ಗೂಗಲ್ ಯಾಹೂ ಅಥವಾ ಮೈಕ್ರೋಸಾಫ್ಟ್`  ಳುನಂತಹ ಸಂಸ್ಥೆಗಳು ಇಂತಹ ವಿಡಿಯೋ ಅಪ್ಲೋಡ್ ತಡೆಗೆ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಸರ್ಕಾರಿ ತನಿಖಾ ಏಜೆನ್ಸಿಗಳು ಸೂಚಿಸಿದ ಬಳಿಕ ಮಾನಹಾನಿಕರ ವಿಡಿಯೋವನ್ನ ತೆಗೆದುಹಾಕುತ್ತಾರೆ. 7-8 ದಿನಗಳ  ಸಮಯದಲ್ಲಿ ವ್ಯಕ್ತಿ ಗೌರವಕ್ಕೆ ಪೆಟ್ಟು ಬಿದ್ದಿರುತ್ತೆ ಎಂದು ಕೋರ್ಟ್ ಬೇಸರ ವ್ಯಕ್ತಪಡಿಸಿದೆ.

ವೆಬ್ದುನಿಯಾವನ್ನು ಓದಿ