Operation Sindoor: ಉಗ್ರರನ್ನು ಕೊಂದಿದ್ದಕ್ಕೆ ಪಾಕಿಸ್ತಾನಕ್ಕೆ ಸಿಟ್ಟು, ಭಾರತೀಯ ನಾಗರಿಕರ ಮೇಲೆ ದಾಳಿ, 10 ಮಂದಿ ಸಾವು
ಮೋಟಾರುಶೆಲ್, ಗುಂಡಿನ ದಾಳಿ ಮೂಲಕ ಭಾರತ ಗಡಿಯಲ್ಲಿ ಪಾಕಿಸ್ತಾನ ಸೇನೆ ದಾಳಿ ನಡೆಸಿದ್ದು ಓರ್ವ ಮಹಿಳೆ ಸೇರಿದಂತೆ 10 ಮಂದಿ ಭಾರತೀಯ ನಾಗರಿಕರು ಸಾವನ್ನಪ್ಪಿದ್ದಾರೆ. ಇದಕ್ಕೆ ಈಗ ಭಾರತೀಯ ಸೇನೆಯೂ ಪ್ರತ್ಯುತ್ತರ ನೀಡಿದೆ.
ಇದರಲ್ಲಿ ಪಾಕಿಸ್ತಾನ ಸೇನೆಗೂ ನಷ್ಟಗಳಾಗಿವೆ ಎಂದು ಮಾಹಿತಿ ಬಂದಿದೆ. ಆಪರೇಷನ್ ಸಿಂದೂರ ನಡೆಸಿದ ಬೆನ್ನಲ್ಲೇ ಭಾರತಕ್ಕೆ ಪಾಕಿಸ್ತಾನ ನಾವೂ ಪ್ರತಿದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ಅಮಾಯಕ ನಾಗರಿಕರ ಮೇಲೆ ದಾಳಿ ನಡೆಸಿ ತನ್ನ ರಣಹೇಡಿತನ ಪ್ರದರ್ಶಿಸಿದೆ.
ಭಾರತ ನಿನ್ನೆ ತಡರಾತ್ರಿ ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ ನಾಗರಿಕರಿಗೆ ಯಾವುದೇ ತೊಂದರೆ ಮಾಡಿಲ್ಲ. ಕೇವಲ ಉಗ್ರರ ಅಡಗುದಾಣಗಳನ್ನಷ್ಟೇ ಗುರಿಯಾಗಿಸಿ ದಾಳಿ ಮಾಡಿತ್ತು. ಆದರೆ ಪಾಕಿಸ್ತಾನ ಈಗ ಭಾರತೀಯ ನಾಗರಿಕರ ಮೇಲೆ ದಾಳಿ ನಡೆಸಿದೆ.