ಕೇಂದ್ರ-ಟ್ವಿಟರ್ ಸಂಘರ್ಷಕ್ಕೆ ಸುಪ್ರೀಂಕೋರ್ಟ್ ಎಂಟ್ರಿ

ಶನಿವಾರ, 13 ಫೆಬ್ರವರಿ 2021 (08:55 IST)
ನವದೆಹಲಿ: ಪ್ರಚೋದನಕಾರಿ ಟ್ವೀಟ್ ಮಾಡುವ ಖಾತೆಗಳನ್ನು ರದ್ದುಗೊಳಿಸುವಂತೆ ಕೇಂದ್ರ ನೀಡಿರುವ ನಿರ್ದೇಶನ ಉಲ್ಲಂಘಿಸಿದ ಬೆನ್ನಲ್ಲೇ ಟ್ವಿಟರ್ ಸಂಸ್ಥೆ ಮತ್ತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.


ಇದರೊಂದಿಗೆ ಕೇಂದ್ರ ಸರ್ಕಾರ ಮತ್ತು ಟ್ವಿಟರ್ ಸಂಸ್ಥೆ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಿದೆ. ಸುಳ್ಳು ಸುದ್ದಿಗಳಿಂದಲೇ ಹೆಚ್ಚಿನ ಕೋಮುಗಲಭೆಗಳು, ದೊಂಬಿ ನಡೆಯುತ್ತವೆ. ಭಾರತದಲ್ಲಿ ಹಲವು ನಕಲಿ ಖಾತೆಗಳು ಕೆಲಸ ಮಾಡುತ್ತಿವೆ. ದೇಶದ ಭದ್ರತೆಗೆ ಇಂತಹ ಖಾತೆಗಳು ಧಕ್ಕೆ ಉಂಟು ಮಾಡುತ್ತಿವೆ. ಹೀಗಾಗಿ ಭಾರತ ವಿರೋಧಿ ಸಾಮಾಜಿಕ ಜಾಲತಾಣ ಖಾತೆಗಳಿಗೆ ಅವಕಾಶ ನೀಡಿರುವ ಟ್ವಿಟರ್ ಗೆ ದಂಡ ವಿಧಿಸಬೇಕು ಎಂದು ಸುಪ್ರೀಂಕೋರ್ಟ್ ಗೆ ಬಂದಿರುವ ಸಾರ್ವಜನಿಕ ಹಿತಾಸಕ್ತಿಯನ್ನು ಸುಪ್ರೀಂ ಕೋರ್ಟ್ ನ ಮೂವರು ನ್ಯಾಯಮೂರ್ತಿಗಳ ಪೀಠ ತನಿಖೆ ನಡೆಸಲಿದೆ. ಈ ಸಂಬಂಧ ಕೇಂದ್ರ ಮತ್ತು ಟ್ವಿಟರ್ ಸಂಸ್ಥೆಗೆ ನೋಟಿಸ್ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ