ನವದೆಹಲಿ : ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಅವರ ಬಣದ 15 ಶಾಸಕರನ್ನು ಅನರ್ಹತೆಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
ಈ ತೀರ್ಪಿನಿಂದಾಗಿ ಸಿಎಂ ಶಿಂಧೆ ಬಣಕ್ಕೆ ಬಿಗ್ ರಿಲೀಫ್ ಸಿಕ್ಕಿದೆ. ಠಾಕ್ರೆ ಅವರ ಸರ್ಕಾರವನ್ನು ಮರುಸ್ಥಾಪಿಸುವ ವಿನಂತಿಯನ್ನು ಸಹ ಸುಪ್ರೀಂ ತಿರಸ್ಕರಿಸಿದೆ. ಉದ್ದವ್ ಠಾಕ್ರೆ ಬಹುಮತ ಸಾಬೀತು ಪರೀಕ್ಷೆ ಎದುರಿಸಿಲ್ಲ.
ಅವರು ರಾಜೀನಾಮೆ ನೀಡಿದ ಕಾರಣ ಯಥಾಸ್ಥಿತಿಯನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ. ಹೀಗಾಗಿ ರಾಜ್ಯಪಾಲರು ಬಿಜೆಪಿಯನ್ನು ಸರ್ಕಾರ ರಚನೆಗೆ ಕರೆದಿರುವುದು ಸರಿಯಾಗಿದೆ ಎಂದು ಕೋರ್ಟ್ ತನ್ನತೀರ್ಪಿನಲ್ಲಿ ಹೇಳಿದೆ.