ಮನಮೋಹನ್ ಸಿಂಗ್ ಕಾಲದಲ್ಲೂ ಸೀಮಿತ ದಾಳಿ ನಡೆದಿತ್ತು: ಕಾಂಗ್ರೆಸ್

ಮಂಗಳವಾರ, 4 ಅಕ್ಟೋಬರ್ 2016 (17:23 IST)
ಪಾಕ್ ಉಗ್ರ ನೆಲೆಗಳ ಮೇಲೆ ಇತ್ತೀಚಿಗೆ ನಡೆಸಲಾದ 'ಸೀಮಿತ ದಾಳಿ' ಭಾರತದ ಇತಿಹಾಸದಲ್ಲಿ ನಡೆದ ಮೊದಲ ಮಿಷನ್ ಅಲ್ಲ. ಈ ರೀತಿಯ ಅನೇಕ ಕಾರ್ಯಾಚರಣೆಗಳನ್ನು ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿಯೇ ಕೈಗೊಳ್ಳಲಾಗಿತ್ತು, ಆದರೆ ನಾವು ಪ್ರಚಾರ ಮಾಡಿರಲಿಲ್ಲ ಎಂದು ಕಾಂಗ್ರೆಸ್  ಪ್ರಧಾನಿ ಮೋದಿಗೆ ಟಾಂಗ್ ನೀಡಿದೆ. 

ರಾಷ್ಟ್ರೀಯ ಸುದ್ದಿ ವಾಹಿನಿಯೊಂದರ ಜತೆ ಮಾತನಾಡುತ್ತಿದ್ದ ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ, ಜನರಲ್ ಬಿಕ್ರಮ್ ಸಿಂಗ್ ಹೇಳಿಕೆಯನ್ನು ಪುನರುಚ್ಛರಿಸುತ್ತ, ಇಂತಹ ಕಾರ್ಯಾಚರಣೆಯನ್ನು ಈ ಮೊದಲು ಸಹ ಕೈಗೊಳ್ಳಲಾಗಿತ್ತು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಸಹ ನಾವು ಸರ್ಜಿಕಲ್ ಸ್ಟ್ರೈಕ್ಸ್ ನಡೆಸಿದ್ದೆವು. ಆದರೆ ಈ ಕುರಿತು ಪ್ರಚಾರ ಮಾಡಿರಲಿಲ್ಲ. ಈ ಕುರಿತು ಡಂಗುರ ಸಾರಿರಲಿಲ್ಲ ಎಂದರು.
 
ಮಾಜಿ ಸೈನ್ಯಾಧಿಕಾರಿ ಜನರಲ್ ಬಿಕ್ರಮ್ ಸಿಂಗ್ ಈ ಹಿಂದೆ ಕೂಡ ಸರ್ಜಿಕಲ್ ಸ್ಟ್ರೈಕ್‌ನ್ನು ಕೈಗೊಳ್ಳಲಾಗಿತ್ತು. ಯುಪಿಎ ಅಧಿಕಾರದಲ್ಲಿದ್ದಾಗ(2013) ಸಹ ಸೀಮಿತ ದಾಳಿಯನ್ನು ನಡೆಸಲಾಗಿತ್ತು ಎಂದಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ