ಸೀಮಿತ ದಾಳಿ ಹಿಂದೆಯೂ ನಡೆದಿವೆ, ಬಿಜೆಪಿ ರಾಜಕೀಯಗೊಳಿಸುತ್ತಿದೆ: ಮಾಯಾವತಿ

ಭಾನುವಾರ, 9 ಅಕ್ಟೋಬರ್ 2016 (15:03 IST)
ಭಾರತೀಯ ಸೇನೆಯ ಸೀಮಿತ ದಾಳಿ ಕುರಿತಂತೆ ಪ್ರಧಾನಿ ಮೋದಿ ಸರಕಾರ ನಾಟಕವಾಡುತ್ತಿದೆ. ಇಂತಹ ಸೀಮಿತ ದಾಳಿಗಳು ಹಿಂದೆಯೂ ನಡೆದಿವೆ ಎಂದು ಮಾಜಿ ಮುಖ್ಯಮಂತ್ರಿ ಮಾಯಾವತಿ ವಾಗ್ದಾಳಿ ನಡೆಸಿದ್ದಾರೆ.
 
ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ದೇಶದ ಜನತೆಗೆ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಬಿಜೆಪಿ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸಿದೆ ಎಂದು ಆರೋಪಿಸಿದ್ದಾರೆ.
 
ದೇಶ ಸ್ವಾತಂತ್ರ ಬಂದ ನಂತರ ಮೊದಲ ಬಾರಿ ಭಾರತೀಯ ಸೇನೆ ಸೀಮಿತ ದಾಳಿ ನಡೆಸಿದೆ ಎನ್ನುವುದಕ್ಕೆ ಪ್ರಧಾನಿ ಮೋದಿ ಉತ್ತರ ನೀಡಬೇಕಾಗಿದೆ. ಇಂತಹ ದಾಳಿಗಳು ಹಿಂದೆ ನಡೆದಿವೆ ಎನ್ನುವ ಜ್ಞಾನ ಕೂಡಾ ಪ್ರಧಾನಿಗಿಲ್ಲ ಎಂದು ಕಿಡಿಕಾರಿದ್ದಾರೆ.
 
ಉತ್ತರ ಕಾಶ್ಮಿರದ ಉರಿ ಸೇನಾ ಕೇಂದ್ರದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 19 ಸೈನಿಕರು ಹುತಾತ್ಮರಾಗಿದ್ದಾರೆ. ಹುತಾತ್ಮ ಸೈನಿಕರ ಬೂದಿ ಇನ್ನು ಕೂಡಾ ಆರಿಲ್ಲ. ಪ್ರಧಾನಿ ಮೋದಿ ಲಕ್ನೋದಲ್ಲಿ ದಸರಾ ಹಬ್ಬ ಆಚರಣೆ ಮಾಡುತ್ತಿದ್ದಾರೆ. ಕೇವಲ ಚುನಾವಣೆ ತಂತ್ರಕ್ಕಾಗಿ ಉತ್ತರಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಿಎಂ ಮಾಯಾವತಿ ಆರೋಪಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ