ಕನ್ನಡಿಗರನ್ನು ಕನ್ನಡದಲ್ಲೇ ಮಾತನಾಡಿಸುತ್ತಿದ್ದ ಸುಷ್ಮಾ ಸ್ವರಾಜ್

ಬುಧವಾರ, 7 ಆಗಸ್ಟ್ 2019 (07:24 IST)
ನವದೆಹಲಿ: ನಿನ್ನೆ ರಾತ್ರಿ ಅಗಲಿದ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಗೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ.


ಲೋಕಸಭೆಯಲ್ಲಿ ತಾವು ಕುಳಿತಿದ್ದ ಜಾಗಕ್ಕೇ ಬಂದು ಮಾತನಾಡಿಸುತ್ತಿದ್ದರು. ಎಲ್ಲರಿಗೂ ತಾಯಿ ಸ್ವರೂಪರಾಗಿದ್ದರು. ವಿಶೇಷವೆಂದರೆ ನಮ್ಮ ಬಳಿ ಯಾವತ್ತೂ ಕನ್ನಡದಲ್ಲೇ ಮಾತನಾಡಿಸುತ್ತಿದ್ದರು ಎಂದು ದೇವೇಗೌಡರು ಸುಷ್ಮಾ ಗುಣಗಾನ ಮಾಡಿದ್ದಾರೆ.

ಬಳ್ಳಾರಿಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಮೇಲೆ ಸುಷ್ಮಾ ಕನ್ನಡಿಗರ ಮೇಲೆ ವಿಶೇಷ ಪ್ರೀತಿ ಇಟ್ಟುಕೊಂಡಿದ್ದರು. ಅವಕಾಶ ಸಿಕ್ಕಾಗಲೆಲ್ಲಾ ಕನ್ನಡದಲ್ಲಿ ಭಾಷಣ ಮಾಡುತ್ತಿದ್ದರು. ಕನ್ನಡಿಗ ಸಂಸದರೊಂದಿಗೆ ತಕ್ಕ ಮಟ್ಟಿಗೆ ಕನ್ನಡ ಮಾತನಾಡುವಷ್ಟು ಕನ್ನಡ ಕಲಿತಿದ್ದರು. ಹೀಗಾಗಿ ಕನ್ನಡಿಗರಿಗೂ ಸುಷ್ಮಾ ಮೇಲೆ ವಿಶೇಷ ಗೌರವವಿತ್ತು ಎಂದರೆ ತಪ್ಪಾಗಲಾರದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ