ಆರ್ ಎಸ್ ಎಸ್ ಮಹಿಳೆಯರ ಚೆಡ್ಡಿ ವಿಷಯ ಕೆಣಕಿದ ರಾಹುಲ್ ಗಾಂಧಿಗೆ ಸುಷ್ಮಾ ಸ್ವರಾಜ್ ತಿರುಗೇಟು
‘ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಲಿರುವ ವ್ಯಕ್ತಿ ಈ ರೀತಿ ಪ್ರಶ್ನಿಸುವುದು ತಪ್ಪು. ಒಂದು ವೇಳೆ ಆರ್ ಎಸ್ಎಸ್ ನಲ್ಲಿ ಮಹಿಳೆಯರಿಗೆ ಆಧುನಿಕ ಉಡುಗೆ ತೊಡಲು ಅವಕಾಶ ಯಾಕೆ ಕೊಡುತ್ತಿಲ್ಲ ಎಂದು ಕೇಳಿದ್ದರೆ ನಾನು ಪ್ರತಿಕ್ರಿಯಿಸುತ್ತಿದ್ದೆ. ಆದರೆ ರಾಹುಲ್ ಬಳಸಿದ ಭಾಷೆ ಸಭ್ಯತೆ ಮೀರಿತ್ತು’ ಎಂದು ಸುಷ್ಮಾ ವಾಗ್ದಾಳಿ ನಡೆಸಿದ್ದಾರೆ.