ವರದಕ್ಷಿಣೆಯಾಗಿ ಸ್ಪೋರ್ಟ್ಸ್ ಬೈಕ್ ನೀಡದ್ದಕ್ಕೆ ಪತ್ನಿಗೆ ತಲಾಖ್
ಲಕ್ನೋದ ಅಮೀನಾಬಾದ್ ಚಿಕಮಂಡಿ ಮಹಿಳೆಯೊಂದಿಗೆ ಸೀತಾಪುರದ ಮೊಹಮ್ಮದ್ ಯೂನಸ್ ಎಂಬಾತ 2021ರಲ್ಲಿ ವಿವಾಹವಾಗಿದ್ದ.
ಮದುವೆಯಾದ ನಂತರ ಮಹಿಳೆಗೆ ಆಕೆಯ ಪತಿ ಮೊಹಮ್ಮದ್ ಹಾಗೂ ಅವನ ತಾಯಿ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು. ಆ ವೇಳೆ ಮೊಹಮ್ಮದ್ಗೆ ಆತನ ಪತ್ನಿಯ ಮನೆಯವರು 2 ಲಕ್ಷ ರೂ. ನೀಡಿದ್ದರು.
ಆದರೆ ಮೊಹಮ್ಮದ್ ಪುನಃ ಹಣಕ್ಕಾಗಿ ಬೇಡಿಕೆಯಿಡಲು ಪ್ರಾರಂಭಿಸಿದ್ದನು. ಆದರೆ ಪತ್ನಿಯ ಮನೆಯವರು ಹಣ ನೀಡಲು ವಿಫಲವಾದಾಗ ಮೊಹಮ್ಮದ್ ಆಕೆಯನ್ನು ಮನೆಯಿಂದ ಹೊರಹಾಕಿದ್ದಾನೆ. ಜೊತೆಗೆ ಮೊಬೈಲ್ನಲ್ಲಿಮೂರು ಬಾರಿ ತಲಾಕ್ ಹೇಳಿ ವಿಚ್ಛೇದನ ನೀಡಿದ್ದಾನೆ.