250 ಕೋಟಿ ರೂ. ಡೆಪಾಸಿಟ್ ಮಾಡಿದವನಿಗೆ ಬಿತ್ತು ಶೇ.45ರಷ್ಟು ಟ್ಯಾಕ್ಸ್
ಭಾನುವಾರ, 26 ಮಾರ್ಚ್ 2017 (14:08 IST)
ನೋಟ್ ಬ್ಯಾನ್ ಬಳಿಕ ಕಾಳಧನಿಕರ ಭೇಟಿಯಾಡಿದ ಆದಾಯ ತೆರಿಗೆ ಇಲಾಖೆ, ಅಲ್ಲಿಯೂ ತಪ್ಪಿಸಿಕೊಂಡ ಧನಿಕರ ಬೇಟೆಯನ್ನೂ ಮುಂದುವರೆಸಿದೆ. ತಮಿಳುನಾಡಿನ ತಿರುಚಂಗೋಡೆಯಲ್ಲಿ ವ್ಯಕ್ತಿಯೊಬ್ಬ ಬರೋಬ್ಬರಿ 250 ಕೋಟಿ ರೂಪಾಯಿಗಳನ್ನ ಇಂಡಿಯನ್ ಓವರ್ ಸೀಸ್ ಬ್ಯಾಂಕ್`ಗೆ ಡೆಪಾಸಿಟ್ ಮಾಡಿದ್ದಾನೆ.
15 ದಿನಗಳ ಕಾಲ ವ್ಯಕ್ತಿಯನ್ನ ಹಿಂಬಾಲಿಸಿದ ಆದಾಯ ತೆರಿಗೆ ಸಿಬ್ಬಂದಿ ಕೊನೆಗೂ ಅವನ ತೆರಿಗೆ ಕಟ್ಟದ ಕೊಟಿ ಕೋಟಿ ಹಣವನ್ನ ಪತ್ತೆ ಹಚ್ಚಿದ್ದಾರೆ.
ಮೊದ ಮೊದಲು ತಪ್ಪಿಸಿಕೊಳ್ಲಲು ಯತ್ನಿಸಿದ ವ್ಯಕ್ತಿ ಇದೀಗ ಬುದ್ಧಿ ಕಲಿತಿದ್ದು, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಸೇರಿಕೊಂಡು ಶೇ.45ರಷ್ಟು ತೆರಿಗೆ ಕಟ್ಟಲು ಒಪ್ಪಿಕೊಂಡಿದ್ದಾನೆ. ಐಟಿ ಅಧಿಕಾರಿಗಳು ಹೇಳುವ ಪ್ರಕಾರ, ಹಳೆಯ ನೋಟುಗಳನ್ನೇ ಈತ ಬ್ಯಾಂಕ್`ಗೆ ಡೆಪಾಸಿಟ್ ಮಾಡಿದ್ದಾನೆ. ಈ ರೀತಿಯ ನೂರಾರು ಮಂದಿ ಯಟಿ ಅಧಿಕಾರಿಗಳ ಲಿಸ್ಟ್`ನಲ್ಲಿದ್ದಾರಂತೆ.