ಫೋರ್ಡ್‌ ಘಟಕ ಖರೀದಿಸಿದ ಟಾಟಾ

ಸೋಮವಾರ, 8 ಆಗಸ್ಟ್ 2022 (14:53 IST)
ಮುಂಬೈ : ಟಾಟಾ ಮೋಟಾರ್ಸ್ ಗುಜರಾತಿನಲ್ಲಿರುವ ಫೋರ್ಡ್ ಕಂಪನಿಯ ಉತ್ಪದನಾ ಘಟಕವನ್ನು 725.7 ಕೋಟಿ ರೂ. ನೀಡಿ ಖರೀದಿಸಿದೆ.

ಟಾಟಾ ಮೋಟಾರ್ಸ್ನ ಅಂಗಸ್ಥೆಯಾದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟಿಡ್(ಟಿಪಿಇಎಂಎಲ್) ಸನಂದ್ನಲ್ಲಿರುವ ಘಟಕವನ್ನು ಖರೀದಿಸಿದೆ ಎಂದು ಟಾಟಾ ಮೋಟಾರ್ಸ್ ಮಾಧ್ಯಮ ಹೇಳಿಕೆಯ ಮೂಲಕ ತಿಳಿಸಿದೆ.

ಭಾನುವಾರ ಎರಡು ಕಂಪನಿಗಳು ಪರಸ್ಪರ ಸಹಿ ಹಾಕಿಕೊಂಡಿದ್ದು ಒಪ್ಪಂದದ ಪ್ರಕಾರ ಅರ್ಹ ಫೋರ್ಡ್ ಉದ್ಯೋಗಿಗಳಿಗೆ ಟಾಟಾ ಕಂಪನಿ ಉದ್ಯೋಗ ನೀಡಲಿದೆ. 

ಟಾಟಾ ಮೋಟಾರ್ಸ್ ಪ್ರಸ್ತುತ ಪ್ರತಿ ವರ್ಷ 3 ಲಕ್ಷ ಯೂನಿಟ್ ಉತ್ಪಾದನಾ ಮಾಡುವ ಸಾಮರ್ಥವನ್ನು ಹೊಂದಿದೆ. ಈ ಘಟಕ ಖರೀದಿಯಿಂದ ಪ್ರತಿ ವರ್ಷ ಉತ್ಪಾದನೆ ಮಾಡುವ ಯೂನಿಟ್ಗಳ ಸಂಖ್ಯೆ 4.20 ಲಕ್ಷಕ್ಕೆ ಏರಲಿದೆ.

ಮಾರುಕಟ್ಟೆಯಲ್ಲಿ ಯಶಸ್ಸು ಕಾಣದ ಕಾರಣ ನಷ್ಟವನ್ನು ಅನುಭವಿಸತೊಡಗಿತು. ಸದ್ಯ ಚೆನ್ನೈನಲ್ಲಿ ಫೋರ್ಡ್ ಕಂಪನಿಯ ಘಟಕವಿದ್ದು 2022ರಲ್ಲಿ ಈ ಘಟಕವನ್ನೂ ಬಂದ್ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ