ಮಾರುಕಟ್ಟೆಯಲ್ಲಿ ಹೂ- ಹಣ್ಣಿನ ಬೆಲೆ ದುಬಾರಿ

ಗುರುವಾರ, 4 ಆಗಸ್ಟ್ 2022 (20:57 IST)
ನಾಳೆ ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆ ಕೆಆರ್ ಮಾರ್ಕೆಟ್ನಲ್ಲಿ ಜನರು ಹೂವು, ಹಣ್ಣು, ಪೂಜಾ ಸಾಮಾಗ್ರಿ ಖರೀದಿಯಲ್ಲಿ ತೊಡಗಿಕೊಂಡಿದ್ದಾರೆ.
ಕೆಆರ್ ಮಾರ್ಕೆಟ್ ಮುಖ್ಯ ರಸ್ತೆಯ ಎರಡು ಬದಿಗಳಲ್ಲೂ ಹಬ್ಬದ ವ್ಯಾಪಾರ  ಆರಂಭವಾಗಿವೆ. ಮುಖ್ಯ ರಸ್ತೆಯಲ್ಲೇ ವ್ಯಾಪಾರ ನಡೆಯುತ್ತಿರುವ ಕಾರಣ, ಕೆಆರ್ ಮಾರ್ಕೆಟ್ ರಸ್ತೆ ಬ್ಲಾಕ್ ಆಗಿದೆ. ಕೆಆರ್ ಮಾರ್ಕೆಟ್ನಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ ಪರಿಣಾಮ, ಸುತ್ತಲಿನ ಪ್ರಮುಖ ರಸ್ತೆಗಳಲ್ಲಿ ದೊಡ್ಡ ಮಟ್ಟದ ಟ್ರಾಫಿಕ್ ಜಾಮ್ ಉಂಟಾಗಿದೆ. ಜನರ ಸಂಚಾರದಿಂದಾಗಿ ವಾಹನಗಳ ಸಂಚಾರಕ್ಕೆ ಅಡೆತಡೆ ಉಂಟಾಗಿದೆ. ಇನ್ನು ಹಬ್ಬದ ಹಿನ್ನೆಲೆ ಹೂ, ಹಣ್ಣು ಮತ್ತು ಪೂಜಾ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಈ ಬಾರಿಯೂ ಹೂವು ಹಣ್ಣುಗಳ ಬೆಲೆ ಶೇ.30 ರಿಂದ 40 ರಷ್ಟು ಏರಿಕೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ