ಶಿಕ್ಷಕನ ಲೈಂಗಿಕ ಕಿರುಕುಳಕ್ಕೆ ಬೇಸತ್ತ ವಿದ್ಯಾರ್ಥಿನಿ !?

ಗುರುವಾರ, 31 ಮಾರ್ಚ್ 2022 (14:07 IST)
ಚೆನ್ನೈ : ತರಗತಿಯ ಶಿಕ್ಷಕನೊಬ್ಬನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ.
 
ಡಿ.ಮುರಳಿಕೃಷ್ಣ (55) ವಿದ್ಯಾರ್ಥಿನಿಗೆ ಕಿರುಕುಳ ನಿಡುತ್ತಿದ್ದ ಶಿಕ್ಷಕ. 7ನೇ ತರಗತಿಯ ವಿದ್ಯಾರ್ಥಿನಿ ಈ ಹಿಂದೆ ಶಿಕ್ಷಕನು ತನ್ನನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದ ಎಂದು ತನ್ನ ಪೋಷಕರಿಗೆ ದೂರು ನೀಡಿದ್ದಳು.

ಈ ಹಿಂದೆ ಬಾಲಕಿಯು ಶಿಕ್ಷಕನಿಗೆ ಎಚ್ಚರಿಕೆ ನೀಡಿದ್ದರೂ ಸಹ ಆತ ಅದನ್ನೇ ಮುಂದುವರಿಸಿದ್ದ. ತಂದೆ ತಾಯಿಯರು ಬಾಲಕಿಗೆ ಧೈರ್ಯ ತುಂಬುವ ಬದಲು, ಶಿಕ್ಷಕ ನಿನ್ನ ತಾತನ ವಯಸ್ಸಿನವನಾಗಿದ್ದಾನೆ ಸಹಿಸಿಕೋ ಎಂದು ಹೇಳಿದ್ದರು.

ಪೊಲೀಸರ ಪ್ರಕಾರ, ಬಾಲಕಿಯ ಪೋಷಕರ ಈ ವರ್ತನೆ ಅವಳನ್ನು ತೀವ್ರ ಖಿನ್ನತೆಗೆ ತಳ್ಳಿದ್ದು, ಶನಿವಾರ ತನ್ನ ಮನೆಯಲ್ಲಿ ವಾರ್ನಿಷ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬಳಿಕ ಪೋಷಕರು ಪೊಲೀಸರ ಮೊರೆ ಹೋಗಿದ್ದು, ಪೊಲೀಸರು ಸೋಮವಾರ ಶಿಕ್ಷಕರನ್ನು ವಶಕ್ಕೆ ಪಡೆದಿದ್ದಾರೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ