ವಿದ್ಯಾರ್ಥಿನಿಯರ ಜೊತೆ ಶಿಕ್ಷಕನ ರಾಸಲೀಲೆ ಬಯಲು ಮಾಡಿದ ವಿದ್ಯಾರ್ಥಿನಿ..!

ಬುಧವಾರ, 19 ಜುಲೈ 2017 (13:50 IST)
ಶಿಕ್ಷಕ ವಿದ್ಯಾರ್ಥಿನಿಯರ ಜೊತೆ ನಡೆಸುತ್ತಿದ್ದ ರಾಸಲೀಲೆಯ ವಿಡಿಯೋವನ್ನ ವಿದ್ಯಾರ್ಥಿನಿಯೇ ಬಹಿರಂಗ ಮಾಡಿರುವ ಘಟನೆ ಬಿಹಾರದ ರೋಹ್ಟಾಸ್ ಜಿಲ್ಲೆಯಲ್ಲಿ ನಡೆದಿದೆ. ಕೋಚಿಂಗ್`ಗೆ ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಶಿಕ್ಷಕನ ಕಾಮಕಾಂಡವನ್ನ ಬಯಲು ಮಾಡಿದ್ಧಾಳೆ.
 

ಮನೋಜಗ್ ಯಾದವ್ ಎಂಬ ಶಿಕ್ಷಕಿ ವಿದ್ಯಾರ್ಥಿನಿಯರ ಜೊತೆ ಕಾಮ ಕ್ರೀಡೆ ನಡೆಸಿ ಅದರ ವಿಡಿಯೋ ಮಾಡುವ ಚಾಳಿ ಬೆಳೆಸಿಕೊಂಡಿದ್ದ.

ಒಂದು ದಿನ ಶಿಕ್ಷಕ ಕೊಠಡಿಯಲ್ಲೇ ತನ್ನ ಮೊಬೈಲ್ ಮರೆತು ಹೋದಾಗ ಅದನ್ನ ಎತ್ತಿಕೊಂಡ ವಿದ್ಯಾರ್ಥಿನಿ ವಾಟ್ಸಾಪ್ ಗ್ರೂಪ್ ಮಾಡಿ ವಿಡಿಯೋಗಳನ್ನ ಹರಿಬಿಟ್ಟಿದ್ದಾಳೆ. ಬಳಿಕ ವಾಟ್ಸಾಪ್ ಗ್ರೂಪ್ ಡಿಲೀಟ್ ಮಾಡಲಾಯಿತಾದರೂ ಅಷ್ಟೊತ್ತಿಗೆ ವಿಡಿಯೋಗಳು ವೈರಲ್ ಆಗಿದ್ದವು.

ಸೋಮವಾರ ವಿಡಿಯೋ ಟೆಲಿಕಪ್ ಪಟ್ಟಣದ ಟಾಕ್ ಆಫ್ ಟೌನ್ ಆಗಿದ್ದು, ರೊಚ್ಚಿಗೆದ್ದ ಜನ ಕೋಚಿಂಗ್ ಸೆಂಟರ್ ಮುಂದೆ ಪ್ರತಿಭಟನೆ ನಡೆಸಿ, ದಹೀರ್-ಸಸರಾಮ್ ರಸ್ತೆ ಬಂದ್ ಮಾಡಿದ್ದಾರೆ.

ಪಿಪಿಸಿಎಲ್ ಕಾಲೇಜಿನಲ್ಲಿ ಟೀಚ್ ಮಾಡುತ್ತಿದ್ದ ಶಿಕ್ಷಕ ಇದರ ಜೊತೆಗೆ ಕೋಚ್ಇಂಗ್ ಕೂಡ ಮಾಡುತ್ತಿದ್ದ. ವಿದ್ಯಾರ್ಥಿನಿಯರ ಜೊತೆ ಪ್ರೇಮದ ನಾಟಕವಾಡಿ ಬಳಿಕ ಅವರ ದೈಹಿಕವಾಗಿ ಬಳಸಿಕೊಂಡು ವಿಡಿಯೋ ಮಾಡುತ್ತಿದ್ದನೆಂದು ತಿಳಿದುಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ