ಮದುವೆಯಾಗಲು ಒಪ್ಪದ 9 ನೇ ತರಗತಿ ವಿದ್ಯಾರ್ಥಿನಿಯ ಕತ್ತು ಸೀಳಿದ ಶಿಕ್ಷಕ
ಅದೃಷ್ಟವಶಾತ್ ವಿದ್ಯಾರ್ಥಿನಿ ಬದುಕುಳಿದಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈಕೆಯ ಕೂಗು ಕೇಳಿ ನೆರೆ ಹೊರೆಯವರು ಈಕೆಯನ್ನು ರಕ್ಷಿಸಿದ್ದಲ್ಲದೆ, ಆರೋಪಿಯನ್ನು ಪೊಲೀಸರಿಗೊಪ್ಪಿಸಿದ್ದಾರೆ.
ಆರೋಪಿ ವಿದ್ಯಾರ್ಥಿನಿಯ ಹಿಂದಿ ಶಿಕ್ಷಕನಾಗಿದ್ದು, ಕಳೆದ ಒಂದು ವರ್ಷದಿಂದ ಬಾಲಕಿಯನ್ನು ತನಗೆ ಮದುವೆ ಮಾಡಿಕೊಡುವಂತೆ ಆಕೆಯ ಪೋಷಕರ ಮೇಲೂ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ. 30 ವರ್ಷದ ಶಿಕ್ಷಕ ಇದೀಗ ಪೊಲೀಸರ ವಶದಲ್ಲಿದ್ದು, ವೃತ್ತಿಯಿಂದಲೂ ಅಮಾನತುಗೊಳಿಸಲಾಗಿದೆ.