ಹಿಂದೂ-ಮುಸ್ಲಿಂ ವಿದ್ಯಾರ್ಥಿಗಳನ್ನು ಪ್ರತ್ಯೇಕ ಮಾಡಿದ ಶಿಕ್ಷಕ ಸಸ್ಪೆಂಡ್
ಸಿಬಿ ಸಿಂಗ್ ಶೆರಾವತ್ ಎಂಬ ಶಿಕ್ಷಕ ಹಿಂದೂ-ಮುಸ್ಲಿಂ ಧರ್ಮದ ವಿದ್ಯಾರ್ಥಿಗಳನ್ನು ಬೇರೆ ಬೇರೆ ತರಗತಿಗಳಲ್ಲಿ ಕುಳ್ಳಿರಿಸಿ ಬೇಧ ಭಾವ ತೋರಿದ್ದಕ್ಕೆ ಅಮಾನತುಗೊಂಡಿದ್ದಾರೆ.
ಎಂಸಿಡಿ ಬಾಯ್ಸ್ ಸ್ಕೂಲ್ ನಲ್ಲಿ ಈ ರೀತಿ ಮಾಡಲಾಗಿದೆ. ಇದೀಗ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅಷ್ಟೇ ಅಲ್ಲದೆ ಮಕ್ಕಳ ಹಕ್ಕುಗಳ ಹಿತರಕ್ಷಣಾ ಆಯೋಗವೂ ಶಾಲಾ ಆಡಳಿತ ಮಂಡಳಿ ವಿರುದ್ಧ ನೋಟಿಸ್ ಜಾರಿ ಮಾಡಿದೆ.