ಹಿಂದೂ ಧರ್ಮಕ್ಕೆ ಮತಾಂತರವಾದ ಮುಸ್ಲಿಂ ಕುಟುಂಬ! ಕಾರಣ ಕೇಳಿದ್ರೆ ಶಾಕ್!
ಛಪ್ರೌಲಿಯ ಅಖ್ತರ್ ಎಂಬವರು ತಮ್ಮ ಕುಟುಂಬದ 12 ಮಂದಿ ಸದಸ್ಯರೊಂದಿಗೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಇದಕ್ಕೆ ಕಾರಣ ಕೆಲವು ತಿಂಗಳ ಹಿಂದೆ ಅನುಮಾನಸ್ಪದವಾಗಿ ಮೃತಪಟ್ಟಿದ್ದ ತಮ್ಮ ಪುತ್ರನ ಸಾವಿನ ಬಗ್ಗೆ ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ ಎಂಬುದು!
ಪುತ್ರನ ಸಾವಿನ ವಿಚಾರದಲ್ಲಿ ತಮ್ಮ ಜತೆಗೆ ಕಾನೂನು ಹೋರಾಟ ನಡೆಸಲು ತಮ್ಮ ಧರ್ಮದವರೇ ತಮಗೆ ಸಹಾಯ ಮಾಡಲಿಲ್ಲ. ಪೊಲೀಸರು ತನಿಖೆ ಬಗ್ಗೆ ಹೆಚ್ಚು ಆಸಕ್ತಿವಹಿಸಲಿಲ್ಲ. ಇದೇ ಕಾರಣಕ್ಕೆ ಅಖ್ತರ್ ಕುಟುಂಬ ಸಾಂಪ್ರದಾಯಿಕವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು, ಹಿಂದೂ ಧಾರ್ಮಿಕ ಮುಖಂಡರು ಇದೀಗ ಅಖ್ತರ್ ಗೆ ನೆರವು ನೀಡಲು ಮುಂದಾಗಿದ್ದಾರಂತೆ!