ಝರ್ಸುಗುಡಾ ರೈಲು ನಿಲ್ದಾಣದ ಬಳಿ ಈ ಹೃದಯವಿದ್ರಾವಕ ಘಟನೆ ನಡೆದಿದ್ದು, ಮೃತನನ್ನು ರಾಜ್ ಗೋಪಾಲ್ ಗೌರವ್ ಪಾತ್ರಾ ಎಂದು ಗುರುತಿಸಲಾಗಿದೆ. ಆತನ ಜತೆಗಿದ್ದ ಸ್ನೇಹಿತನಿಗೂ ಕೂಡ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.
ರೈಲು ನಿಲ್ದಾಣದ ಬಳಿ ಹೋದಾಗ ವಿದ್ಯಾರ್ಥಿಗಳು ಅಲ್ಲಿ ಗೂಡ್ಸ್ ರೈಲು ನಿಂತಿದ್ದನ್ನು ನೋಡಿದ ಯುವಕರು ಮೇಲೆ ಹೈ ಟೆನ್ಷನ್ ವಿದ್ಯುತ್ ಲೈನ್ ಇರುವುದ ಪರಿವೆ ಇಲ್ಲದೇ ರಾಜ್ ಗೋಪಾಲ್ ಮತ್ತು ಲೋಕೇಶ್ ರೈಲನ್ನೇರಿದ್ದಾರೆ. ತಕ್ಷಣ ವಿದ್ಯುತ್ ತಗುಲಿ ಗಂಭೀರವಾಗಿ ಗಾಯಗೊಂಡ ರಾಜ್ ಗೋಪಾಲ್ ಸ್ಥಳದಲ್ಲೇ ಮೃತ ಪಟ್ಟರೆ, ಲೋಕೇಶ್ ಗಂಭೀರವಾಗಿ ಗಾಯಗೊಂಡ.