ಹೊಸ ಮೊಬೈಲ್ ಕೊಡಿಸದ್ದಕ್ಕೆ ಯುವತಿ ಆತ್ಮಹತ್ಯೆ
ಪಬ್ ಜಿ ಆಡಲು ನನಗೆ ಹೊಸ ಮೊಬೈಲ್ ಕೊಡಿಸಬೇಕು ಎಂದು ಯುವತಿ ಬೇಡಿಕೆಯಿಟ್ಟಿದ್ದಳು. ಆದರೆ ಮನೆಯವರು ಒಪ್ಪದ ಕಾರಣ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ದ್ವಿತೀಯ ಪಿಯು ಓದುತ್ತಿದ್ದ ವಿದ್ಯಾರ್ಥಿನಿಯಾಗಿದ್ದು, ಪರೀಕ್ಷೆ ಮುಗಿದ ಮೇಲೆ ಫೋನ್ ಕೊಡಿಸುವುದಾಗಿ ಪೋಷಕರು ಹೇಳಿದ್ದರು. ಆದರೆ ಇದಕ್ಕೆ ಮೊದಲೇ ಯುವತಿ ದುಡುಕಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.