ಉತ್ತರಕಾಶಿ ಮೇಘಸ್ಫೋಟ, ವಯನಾಡು ದುರಂತವನ್ನು ನೆನಪಿಸುವಂತಿಗೆ ಭಯಾನಕ ವಿಡಿಯೋ

Sampriya

ಮಂಗಳವಾರ, 5 ಆಗಸ್ಟ್ 2025 (16:34 IST)
Photo Credit X
ಡೆಹ್ರಾಡೂನ್: ಖೀರ್ ಗಂಗಾ ನದಿಯ ಮೇಲ್ಭಾಗದ ಜಲಾನಯನ ಪ್ರದೇಶದಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಉಂಟಾದ ಭೀಕರ ಪ್ರವಾಹದಿಂದ ಕನಿಷ್ಠ ನಾಲ್ವರು ಸಾವನ್ನಪ್ಪಿ, ಹಲವರು ನಾಪತ್ತೆಯಾಗಿದ್ದಾರೆ. 

ಉತ್ತರಕಾಶಿ ಜಿಲ್ಲೆಯ ಧಾರಾಲಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದ ಮೇಘಸ್ಪೋಟ ಹಲವು ಜೀವಗಳನ್ನು ಬಲಿ ಪಡೆದು, ಅಪಾರ ಆಸ್ತಿ ಹಾನಿ ಮಾಡಿದೆ. 

ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡಗಳನ್ನು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಪೀಡಿತ ಪ್ರದೇಶಗಳಿಗೆ ನಿಯೋಜಿಸಲಾಗಿದೆ ಎಂದು ಆರ್ಯ ಹೇಳಿದರು.

ಈ ದುರಂತ ಕಳೆದ ವರ್ಷ ವಯನಾಡಿನಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತವನ್ನು ನೆನಪಿಸುವಂತಿದೆ. ಸದ್ಯ ಮೇಘಸ್ಪೋಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 



ഉത്തരകാശിയിൽ മേഘവിസ്ഫോടനം; വീടുകൾ സ്ഥലങ്ങൾ ഒലിച്ചുപോയി. 60ലേറെ പേരെ കാണാതായി.. കനത്ത മഴ തുടരുന്നു.. #uttarakhand#cloudburst#flashfloods#uttarkashi pic.twitter.com/p9FC7PNpxB

— ☭ നിങ്ങളിലൊരാള്‍ ☭ (@loveucomred) August 5, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ