ಉತ್ತರಪ್ರದೇಶದ ಲಕ್ನೋದಲ್ಲಿ ಶಂಕಿತ ಉಗ್ರನಿಂದ ಫೈರಿಂಗ್

ಮಂಗಳವಾರ, 7 ಮಾರ್ಚ್ 2017 (17:57 IST)
ಠಾಕೂರ್‌ಗಂಜ್‌ನಲ್ಲಿ ಶಂಕಿತ ಉಗ್ರ ಮತ್ತು ಭಯೋತ್ಪಾದನೆ ನಿಗ್ರಹ ದಳದ ಮಧ್ಯೆ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಉತ್ತರಪ್ರದೇಶದ ಲಕ್ನೋದಲ್ಲಿರುವ ಠಾಕೂರ್ ಗಂಜ್ ಪ್ರದೇಶದ ಹಾಜಿ ಕಾಲೋನಿಯಲ್ಲಿ ಸುಮಾರು ಆರ್ಧ ಗಂಟೆಯಿಂದ ಎಟಿಎಸ್ ಮತ್ತು ಉಗ್ರನ ನಡುವೆ ಗುಂಡಿನ ಕಾಳಗ ನಡೆಯುತ್ತಿದ್ದು
 
ವರದಿಗಳ ಪ್ರಕಾರ, ಸೈಫುಲ್ಲಾ ಎನ್ನುವ ಉಗ್ರ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ ನಂತರ ಭದ್ರತಾ ಪಡೆಗಳು ಪ್ರತ್ಯುತ್ತರ ನೀಡಿವೆ ಎಂದು ಮೂಲಗಳು ತಿಳಿಸಿವೆ.
 
ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್‌ ಉಗ್ರರ ಗುಂಪಿನ ಸದಸ್ಯನಾದ ಸೈಫುಲ್ಲಾ, ತನ್ನನ್ನು ತಾನು ಕೋಣೆಯೊಂದರಲ್ಲಿ ಕೂಡಿಹಾಕಿಕೊಂಡು ಗುಂಡಿನ ದಾಳಿ ನಡೆಸುತ್ತಿದ್ದಾನೆ. ಉಗ್ರನಿರುವ ಕೋಣೆಯನ್ನು ಕಮಾಂಡೋಗಳು ಸುತ್ತುವರಿದಿವೆ. 
 
ಮಧ್ಯಪ್ರದೇಶದಲ್ಲಿ ಇಂದು ಬೆಳಿಗ್ಗೆ ಶಾಜಾಪುರ್ ಜಿಲ್ಲೆಯಲ್ಲಿ ಪ್ಯಾಸೆಂಜರ್ ರೈಲಿನಲ್ಲಿ ಸ್ಫೋಟ ಸಂಭವಿಸಿತ್ತು. ಆದರೆ, ಸ್ಠೋಟಕ್ಕೆ ಏನು ಕಾರಣ ಎನ್ನುವುದು ತಿಳಿದು ಬಂದಿಲ್ಲ. ಉಗ್ರ ಸೈಫುಲ್ಲಾ ಸ್ಫೋಟದಲ್ಲಿ ಭಾಗಿಯಾಗಿರಬಹುದು ಎಂದು ಮಧ್ಯಪ್ರದೇಶದ  ಪೊಲೀಸರು ನೀಡಿದ ಮಾಹಿತಿ ಮೇರೆಗೆ ಉತ್ತರಪ್ರದೇಶ ಪೊಲೀಸರು ಸೈಫುಲ್ಲಾನನ್ನು ಘೇರಾವ್ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
 
 ಉಗ್ರ ಸೈಫುಲ್ಲಾ ಬಳಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳಿರಬಹುದು ಎಂದು ಭದ್ರತಾ ಪಡೆಗಳು ಶಂಕೆ ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ